ETV Bharat / state

ಹೇಳಿದ್ದು ದೇವರನಾಮ, ಹಾಕಿದ್ದು ಪಂಗನಾಮ: 70 ಲಕ್ಷ ರೂ. ಹಣದೊಂದಿಗೆ ರಾತ್ರೋರಾತ್ರಿ ಎಸ್ಕೇಪ್ ಆದ ಮಹಿಳೆ - ಮಹಿಳೆ ಎಸ್ಕೇಪ್

ಬ್ಯಾಂಕ್​ನಲ್ಲಿ ಸಾಲ ಕೊಡಿಸುವುದಾಗಿ ಮಹಿಳೆಯರಿಂದ ಹಣ ಕಟ್ಟಿಸಿಕೊಂಡ ಮಹಿಳೆಯೊಬ್ಬಳು ಹಣದೊಂದಿಗೆ ಪರಾರಿಯಾಗಿದ್ದಾಳೆ. ಆಕೆಯನ್ನು ನಂಬಿ ಹಣ ಕಟ್ಟಿದ ಮಹಿಳೆಯರು ಕಂಗಾಲಾಗಿದ್ದಾರೆ.

cheating in the name of Chit fund
ಹಣ ಪಡೆದು ವಂಚನೆ
author img

By

Published : Jul 1, 2021, 8:07 AM IST

ಮೈಸೂರು: ದೇವರನಾಮ ಹಾಗೂ ಜನರ ಮುಗ್ಧತೆ ಬಂಡವಾಳ ಮಾಡಿಕೊಂಡ ಚಾಲಾಕಿ ಮಹಿಳೆಯೊಬ್ಬಳು, ತನ್ನನ್ನು ನಂಬಿದವರಿಗೆ 70 ಲಕ್ಷ ರೂಪಾಯಿ ಹಣ ವಂಚಿಸಿ ರಾತ್ರೋರಾತ್ರಿ ಏರಿಯಾ ಬಿಟ್ಟು ಪರಾರಿಯಾಗಿದ್ದಾಳೆ.

ಮೈಸೂರಿನ ಸಾತಗಳ್ಳಿ 1ನೇ ಹಂತದ ಬಡಾವಣೆಯಲ್ಲಿ ಒಂದು ವರ್ಷದ ಹಿಂದೆ ಬಾಡಿಗೆ ಮನೆಗೆ ಬಂದ ಹೇಮಲತಾ ಎಂಬಾಕೆ, ತನ್ನ ನಾಜೂಕು ಮಾತುಗಳಿಂದ ಲೋನ್ ಕೊಡಿಸುವುದಾಗಿ ನಂಬಿಸಿ‌ ಹಣ ಏರಿಯಾದ ಮಹಿಳೆಯರಿಂದ ಹಣ ಪಡೆದಿದ್ದಳು. ಇದೀಗ ಹಣದೊಂದಿಗೆ ಅರ್ಧ ರಾತ್ರಿಯಲ್ಲಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾಳೆ.

ಹಣ ಕಳೆದುಕೊಂಡು ಕಂಗಾಲಾದ ಮಹಿಳೆಯರು

ಈಕೆಯ ಮಾತಿಗೆ ಮರುಳಾಗಿ ಗಂಡ ಹಾಗೂ ಕುಟುಂಬಸ್ಥರಿಗೆ ತಿಳಿಯದೇ ಹಣ ಕೊಟ್ಟ ಮಹಿಳೆಯರು ಮಾತ್ರ ಕಂಗಾಲಾಗಿದ್ದಾರೆ. ಸಾತಗಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಗೆ ವಾಸಕ್ಕೆ ಬಂದ ಹೇಮಲತಾ,‌ ಮೊದ ಮೊದಲು ದೇವರಿಗೆ ಪೂಜೆ ಸಲ್ಲಿಸುವುದು, ದೇವಸ್ಥಾನಗಳನ್ನು ಸುತ್ತುವ ಮೂಲಕ ಸುತ್ತಮುತ್ತಲಿನ ಮಹಿಳೆಯರಿಗೆ ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿದ್ದಳು. ತಾನು ಚೀಟಿ ವ್ಯವಹಾರ ನಡೆಸುವುದಾಗಿ ಹಾಗೂ ಬ್ಯಾಂಕ್​ಗಳಲ್ಲಿ ಸುಲಭವಾಗಿ ಲೋನ್ ಕೊಡಿಸುವುದಾಗಿ ಅವರಿಗೆ ಹೇಳಿದ್ದಳು.

ಓದಿ : ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ಆರೋಪ: ವ್ಯಕ್ತಿ ಬಂಧನ

ಇವರ ನಯವಂಚನೆಯ ಮರ್ಮ ಅರಿಯದ ಮಹಿಳೆಯರು ಚೀಟಿ ಹಾಗೂ ಲೋನ್ ವಿಚಾರವಾಗಿ 70 ಲಕ್ಷ ರೂ‌. ಹಣ ಕಟ್ಟಿ, ಈಗ ದಿಕ್ಕೇ ತೋಚದಂತಾಗಿದ್ದಾರೆ. ಹೇಮಲತಾ ವಂಚಕಿ ಎಂಬುವುದು ಹಣ ಕಳೆದುಕೊಂಡ ಮೇಲೆ ಮಹಿಳೆಯರಿಗೆ ಜ್ಞಾನೋದಯವಾಗಿದೆ.‌ ಇದೀಗ ಹೇಮಲತಾ ಮತ್ತು ಈಕೆಯ ವಂಚನೆಗೆ ಸಾಥ್ ನೀಡಿದ ಶಿವನಂಜು ಎಂಬಾತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.