ಮೈಸೂರು: ಎರಡು ಮಕ್ಕಳ ತಾಯಿಯಾಗಿದ್ದರೂ ತನ್ನ ಹಳೆಯ ಪ್ರಿಯಕರನ ಜೊತೆಯಲ್ಲಿ ಮಹಿಳೆ ಸಂಪರ್ಕ ಇಟ್ಟುಕೊಂಡಿದ್ದಳು. ಇದನ್ನು ನೋಡಿದ ಗ್ರಾಮಸ್ಥರು ಆಕೆಯ ಪ್ರಿಯಕರನಿಗೆ ಥಳಿಸಿರುವ ಘಟನೆ ಬುಧವಾರ ರಾತ್ರಿ ನಂಜನಗೂಡು ತಾಲೂಕಿನ ಹಳ್ಳಿದಿಟ್ಟ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ: ಕೊಂತೆಗಾಲ ಗ್ರಾಮದ ಮಹೇಶ್ ಕುಮಾರ್ ಹಲ್ಲೆಗೊಳಗಾದ ಯುವಕ. ಪಿಯುಸಿ ಓದುತ್ತಿದ್ದ ವೇಳೆ ಮಸಗೆ ಗ್ರಾಮದ ಯುವತಿ ಜೊತೆ ಈತನಿಗೆ ಲವ್ ಆಗಿತ್ತು. ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಮುಂದಾಗಿದ್ದರು. ಈ ವಿಚಾರ ಯುವತಿ ಮನೆಯವರಿಗೆ ತಿಳಿದಾಕ್ಷಣ ಆಕೆಯ ಕುಟುಂಬಸ್ಥರು ಹಳ್ಳಿದಿಡ್ಡಿ ಗ್ರಾಮದ ಯುವಕನ ಜೊತೆ ಮದುವೆ ಮಾಡಿದ್ದರು. ಆದ್ರೆ ಇವರಿಬ್ಬರ ಪ್ರೀತಿ ಮುಂದುವರಿದಿತ್ತು ಎನ್ನಲಾಗ್ತಿದೆ.
ಓದಿ: 'ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕುಟುಂಬ ಕಲಹವಷ್ಟೇ': ಕಸ್ತೂರಿರಾಜ ಸ್ಪಷ್ಟನೆ
ಈಗ ಆಕೆ ಎರಡು ಮಕ್ಕಳ ತಾಯಿ. ಆದ್ರೂ ಸಹಿತ ತನ್ನ ಹಳೆಯ ಪ್ರಿಯಕರನ ಜೊತೆ ಸಂಪರ್ಕ ಬೆಳೆಸಿದ್ದಾಳೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎಂದೂ ಹೇಳಲಾಗ್ತಿದೆ. ಈ ವಿಚಾರ ಆಕೆಯ ಪತಿಗೆ ತಿಳಿದಿದ್ದು, ಆಕೆಯ ಗಂಡ ಗ್ರಾಮಸ್ಥರ ಹಿರಿಯರಿಗೆ ಮಾಹಿತಿ ಮುಟ್ಟಿಸಿದ್ದಾನೆ. ನಂತರ ಯುವಕನಿಗೆ ಬುದ್ಧಿ ಕಲಿಸಬೇಕೆಂದು ಆಕೆಯ ಗಂಡ ಮತ್ತು ಗ್ರಾಮಸ್ಥರು ನಿರ್ಧರಿಸಿದ್ದರು.
ಗ್ರಾಮಸ್ಥರು ಸಂತ್ರಸ್ತನ ಪತ್ನಿ ಮೂಲಕ ಆ ಯುವಕನನ್ನು ಹಳ್ಳಿದಿಡ್ಡಿ ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಆಕೆಯಿಂದ ಫೋನ್ ಬಂದಿದ್ದೇ ತಡ, ಯುವಕ ಊರಿಗೆ ದೌಡಾಯಿಸಿದ್ದಾನೆ. ನಂತರ ಗ್ರಾಮಸ್ಥರು ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಘಟನೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾನಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗ್ತಿದೆ. ಆದ್ರೆ ಥಳಿತಕ್ಕೊಳಗಾದ ಯುವಕನಿಂದ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ.