ETV Bharat / state

ಆನ್​ಲೈನ್​ ಶಿಕ್ಷಣ ಕೈಬಿಡದಿದ್ದರೆ ಬೃಹತ್​ ಹೋರಾಟ: ವಾಟಾಳ್​ ನಾಗರಾಜ್​ ಎಚ್ಚರಿಕೆ

ಆನ್​ಲೈನ್ ಶಿಕ್ಷಣವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೃಹತ್​​ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್
author img

By

Published : Jun 2, 2020, 4:49 PM IST

ಮೈಸೂರು: ಆನ್​ಲೈನ್ ಶಿಕ್ಷಣವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಜೂನ್​ 21ರಂದು ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶ್ರೀಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅವರು, ಆನ್​ಲೈನ್ ಶಿಕ್ಷಣ ಎಂದರೆ ದೊಡ್ಡ ನರಕವಿದ್ದಂತೆ. ಎಸ್ಎಸ್ಎಲ್​ಸಿ ಹಾಗೂ ಪದವಿ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್

ಬಿಜೆಪಿಯಲ್ಲಿ ಯಡಿಯೂರಪ್ಪ ಪಕ್ಷಾತೀತ ನಾಯಕ. ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಆದರೆ ಅವರಿಗೆ ಹಿತ್ತಾಳೆ ಕಿವಿಯಿದೆ. ಸುತ್ತಮುತ್ತ ಚಾಡಿ ಹೇಳುವವರನ್ನೇ ಇಟ್ಟುಕೊಂಡಿದ್ದಾರೆ. ಅವರಿಂದ ದೂರ ಇರಬೇಕು ಎಂದರು.

ನಾನು ಬಿಜೆಪಿ ಸೇರುವುದಿಲ್ಲ. ಬಿಜೆಪಿಯವರು ನನ್ನನ್ನು ಎಂಎಲ್​ಸಿ ಮಾಡಿದರೆ ಅವರ ತೂಕ ಹೆಚ್ಚುತ್ತದೆ. ನಾನು ಮುಂದಿನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಲಬುರಗಿ ಅಥವಾ ಬೆಂಗಳೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ವಾಟಾಳ್​ ಇದೇ ಸಂದರ್ಭದಲ್ಲಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.