ಮೈಸೂರು: ಜುಬಿಲಿಯಂಟ್ ಕಾರ್ಖಾನೆಯ ಮತ್ತಿಬ್ಬರು ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21 ಕ್ಕೆ ಹೆಚ್ಚಳವಾಗಿದೆ.
ರೋಗಿ ನಂ 111, 24 ವರ್ಷದ ವ್ಯಕ್ತಿ ಮತ್ತು ರೋಗಿ ನಂ.112, 22 ವರ್ಷದ ವ್ಯಕ್ತಿಯಾಗಿದ್ದಾರೆ. ಇವರಲ್ಲಿ ಒಬ್ಬರು ಮೈಸೂರಿನ ನಿವಾಸಿ. ಇವರು ರೋಗಿ ನಂ.88ರ ಕೊಠಡಿಯಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎಂಬ ಮಾಹಿತಿ ದೊರೆತಿದೆ.