ಮೈಸೂರು: ಹುಲಿ ಚರ್ಮವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಇಲಾಖೆಯ ಸಂಚಾರಿ ದಳ ಬಂಧಿಸಿದ್ದು, ಬಂಧಿತರಿಂದ ಒಂದು ಕಾರು ಹಾಗೂ ಹುಲಿ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ. ಮಾಹಿತಿ ಮೇರೆಗೆ ಡಿಸಿಎಫ್ ಎ.ಟಿ ಪೂವಯ್ಯ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು.
ಬಂಧಿತರಾದ ಆಕಾಶ್ ರಾವ್ ಮತ್ತು ವಿಷ್ಣು ಎಂಬುವವರನ್ನು ಹುಲಿ ಚರ್ಮದ ಸಮೇತ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಬಳಿ ಬಂಧಿಸಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.