ETV Bharat / state

ಅಕ್ರಮ ಸಂಬಂಧ ವಿಚಾರಕ್ಕೆ ಪತಿಯ ಹತ್ಯೆ: ಪತ್ನಿ-ಪ್ರಿಯಕರ ಸೇರಿ ಮೂವರ ಬಂಧನ - mysore

ನಂಜನಗೂಡು ತಾಲೂಕಿನ ಕಪ್ಪೆಸೋಗೆ ಗ್ರಾಮದ ನಾಲೆಯಲ್ಲಿ ಐದು ದಿನಗಳ ಹಿಂದೆ ಶಿವರಾಜು ಶವ ಪತ್ತೆಯಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶವವೆಂದು ಪ್ರಕರಣ ದಾಖಲಾಗಿ, ತನಿಖೆಗೆ ತಂಡ ರಚನೆ ಮಾಡಲಾಗಿತ್ತು.

three accused Arrested
ಬಂಧಿತ ಆರೋಪಿಗಳು
author img

By

Published : Dec 17, 2020, 7:20 PM IST

Updated : Dec 17, 2020, 8:04 PM IST

ಮೈಸೂರು: ಅಕ್ರಮ ಸಂಬಂಧ ಬಿಡುವಂತೆ ಬುದ್ಧಿ ಹೇಳಿದ ಪತಿಯನ್ನು ಕೊಂದ ಪತ್ನಿ, ‌ಆಕೆಯ ಪ್ರಿಯಕರ‌ ಹಾಗೂ ಕೊಲೆಗೆ ಸಹಕಾರ ನೀಡಿದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸರಗೂರು ತಾಲೂಕಿನ ಅಡ್ಡಹಳ್ಳಿ ಗ್ರಾಮದ ಶಿವರಾಜು (39) ಕೊಲೆಯಾದವರು. ದಿವ್ಯ (ಹೆಸರು ಬದಲಾಯಿಸಲಾಗಿದೆ), ಪ್ರಿಯಕರ ಯೋಗೀಶ್, ಆತನ ಸ್ನೇಹಿತ ಚೆಲುವ ಬಂಧಿತ ಆರೋಪಿಗಳು.

ನಂಜನಗೂಡು ತಾಲೂಕಿನ ಕಪ್ಪೆಸೋಗೆ ಗ್ರಾಮದ ನಾಲೆಯಲ್ಲಿ ಐದು ದಿನಗಳ ಹಿಂದೆ ಶಿವರಾಜು ಶವ ಪತ್ತೆಯಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶವವೆಂದು ಪ್ರಕರಣ ದಾಖಲಾಗಿ, ತನಿಖೆಗೆ ತಂಡ ರಚನೆ ಮಾಡಲಾಗಿತ್ತು.

ಅಡ್ಡಹಳ್ಳಿ ಗ್ರಾಮದ ಶಿವರಾಜು ಹಾಗೂ ದಿವ್ಯ (ಹೆಸರು ಬದಲಾಯಿಸಲಾಗಿದೆ) ವಿವಾಹವಾಗಿ 15 ವರ್ಷಗಳಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಜಮೀನುಗಳಲ್ಲಿ ಶುಂಠಿ ಬಿಡಿಸಲು ತೆರಳಿದಾಗ ಚಿಕ್ಕೋಡು ಗ್ರಾಮದ ಆಟೋ ಚಾಲಕ ಯೋಗೀಶ್ ಜೊತೆ ಸ್ನೇಹ ಬೆಳೆದು ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.

ಈ‌ ವಿಚಾರ ಪತಿಗೆ ಗೊತ್ತಾಗಿ ಕೆಲಸಕ್ಕೆ ಹೋಗಬೇಡ ಎಂದು ಪತ್ನಿಗೆ ತಾಕೀತು ಮಾಡಿದ್ದ‌. ಪತಿಯ ಮಾತಿಗೆ ಕೆರಳಿದ ಪತ್ನಿ ತನ್ನ ಪ್ರಿಯಕರನಿಗೆ ವಿಷಯ ಮುಟ್ಟಿಸಿದ್ದಾಳೆ. ಪತಿಗೆ ಚೆನ್ನಾಗಿ ಮದ್ಯಪಾನ ಮಾಡಿಸುವಂತೆ ಪ್ರಿಯಕರ ಯೋಗೀಶ್ ಪ್ಲಾನ್ ಹೇಳಿಕೊಟ್ಟಿದ್ದಾನೆ. ಅದರಂತೆ ಮದ್ಯಪಾನ ಮಾಡಿಸಿದಾಗ ನಶೆಯಲ್ಲಿದ್ದ ಶಿವರಾಜನ ಕೈ-ಕಾಲು ಕಟ್ಟಿ ಡಿ‌‌. 7ರಂದು ಕಪ್ಪುಸೋಗೆ ಗ್ರಾಮದ ನಾಲೆಗೆ ಯೋಗೀಶ್ ಹಾಗೂ ಈತನ ಸ್ನೇಹಿತ ಚೆಲುವ ಎಸೆದಿದ್ದರು ಎನ್ನಲಾಗ್ತಿದೆ.

ಇತ್ತ‌ ದಿವ್ಯ (ಹೆಸರು ಬದಲಾಯಿಸಲಾಗಿದೆ), ಪತಿ ನಾಪತ್ತೆ ಪ್ರಕರಣ ದಾಖಲು ಮಾಡಿರಲಿಲ್ಲ. ಡಿ. 15ರಂದು ನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದಾಗ ಅಡ್ಡಹಳ್ಳಿಯ ಗ್ರಾಮಸ್ಥರೊಬ್ಬರು ಶಿವರಾಜು ಎಂದು ಗುರುತಿಸಿ ಪೊಲೀಸರಿಗೆ ಕುಟುಂಬದ ಮಾಹಿತಿ ನೀಡಿದ್ದಾರೆ. ನಂತರ ಆತನ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ಮಾಡಿದಾಗ ಆಕೆ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Last Updated : Dec 17, 2020, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.