ETV Bharat / state

ಸಾರಾ ಮಹೇಶ್​ಗೆ ಮಂತ್ರಿಗಿರಿ ಕೊಡುವ ಅವಶ್ಯಕತೆ ಇರ್ಲಿಲ್ಲ: ಜಿಟಿಡಿ ಕಿಡಿ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಜಿ.ಟಿ.ದೇವೇಗೌಡ ಗುಡುಗಿದ್ದಾರೆ.

ಮಾಜಿ ಸಚಿವ ಜಿ.ಟಿ.ದೇವೇಗೌಡ
author img

By

Published : Sep 21, 2019, 7:02 PM IST

Updated : Sep 21, 2019, 7:31 PM IST

ಮೈಸೂರು: ಸಾರಾ ಮಹೇಶ್​ಗೆ ಮಂತ್ರಿಗಿರಿ ಕೊಡುವ ಅವಶ್ಯಕತೆನೇ ಇರ್ಲಿಲ್ಲ. ಮಹೇಶ್​ನನ್ನು ಮೈಸೂರಿನಲ್ಲಿ ಬೆಳೆಸಿ ನನ್ನನ್ನು ಮೂಲೆ ಗುಂಪು ಮಾಡುವುದಕ್ಕೆ ಅವರಿಗೆ ಮಂತ್ರಿ ಸ್ಥಾನ ನೀಡಲಾಯಿತು ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಕಿಡಿಕಾರಿದ್ದಾರೆ.

ಮಾಜಿ ಸಚಿವ ಜಿ.ಟಿ.ದೇವೇಗೌಡ

ವಿಜಯನಗರದಲ್ಲಿರುವ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ವಿಶ್ರಾಂತಿ ಮಾಡ್ತಿದ್ದಾರೆ ಅಂತ ಹೇಳ್ತಿದ್ದಿರಲ್ಲ, ನಿಮ್ಮ ಹಾಗೆ ಅಮೆರಿಕ, ರಷ್ಯ, ಇಸ್ರೇಲ್​ನಲ್ಲಿನನಗೆ ವಿಶ್ರಾಂತಿ ಬೇಕಿರಲಿಲ್ಲ. ಅವತ್ತು ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆಗಿ ರೇವಣ್ಣ ಉಪಮುಖ್ಯಮಂತ್ರಿ ಆಗಬೇಕೆಂದಿತ್ತು. ಈ ವಿಚಾರದಲ್ಲಿ ದೇವೇಗೌಡರಿಗೂ ಸಹ ಇಷ್ಟ ಇತ್ತು. ಅದು ನಿಮಗೆ ಇಷ್ಟ ಇರ್ಲಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಎಚ್​.ಡಿ. ಕುಮಾರಸ್ವಾಮಿಗೆ ಕುಟುಕಿದರು.

ಸಿದ್ದರಾಮಯ್ಯ ಇರೋವರೆಗೂ ಮೈಸೂರಿಗೆ ನಿಮಗೆ ಎಂಟ್ರಿ ಇರ್ಲಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಹೋದ ಮೇಲೆ ನಾನು ನಿಮ್ಮನ್ನು ಮೆರವಣಿಗೆ ಮಾಡಿ ಕರೆದುಕೊಂಡು ಬಂದೆ. ಕಲಾಮಂದಿರದಲ್ಲಿ ಕಾರ್ಯಕರ್ತರು ಬೆಳ್ಳಿ ಕಿರೀಟ ಇಟ್ಟು ಸ್ವಾಗತಿಸಿದ್ರು ಎಂದರು.

ರೇವಣ್ಣಗೆ ಸಿದ್ದರಾಮಯ್ಯ ಮೇಲೆ ಪ್ರೀತಿ ಇತ್ತು. ಚುನಾವಣೆಯಲ್ಲಿ ಅವರು ಸಿದ್ದರಾಮಯ್ಯರನ್ನು ಕರೆದುಕೊಂಡು ಹೋಗಿ ಗೆಲ್ಲಿಸಿ ಬಿಟ್ಟರು. ಸಿದ್ದರಾಮಯ್ಯ ಅಥವಾ ಪರಮೇಶ್ವರ್ ಅವರನ್ನೋ ಸಿ.ಎಂ. ಮಾಡಿ ರೇವಣ್ಣ ಉಪ ಮುಖ್ಯಮಂತ್ರಿಯಾಗಿದ್ದಿದ್ದರೆ ಸರ್ಕಾರ ಇರ್ತಿತ್ತು ಎಂದರು.

ಅದ್ಯಾವುದೋ ಹೋಟೆಲ್​ನಲ್ಲಿ ಹೋಗಿ ಇರ್ತಿದ್ರಿ. ನಾವು ಪಿಎಗೆ ಕಾಲ್ ಮಾಡ್ಕೊಂಡ್ ಗೇಟ್ ಬಳಿ ನಿಂತ್ಕೊಂಡ್ ಇರ್ತಿದ್ವಿ. ಫೋನ್ ಮಾಡಿ ಅನುಮತಿ ತಗೊಂಡು ಕಾರ್ಯಕರ್ತರು, ನಾವು ಬರಬೇಕಿತ್ತು ಎಂದು ಬೇಸರ ಹೊರಹಾಕಿದರು.

ನನ್ನ ಮಗ ಹರೀಶ್ ಗೌಡ ಹುಣಸೂರಲ್ಲಿ ಸ್ಪರ್ಧೆ ಮಾಡೋಲ್ಲ, ಹರೀಶ್ ಗೌಡ ಸದ್ಯಕ್ಕೆ ಚುನಾವಣೆಗೆ ನಿಲ್ಲೋಲ್ಲ. ನಾನು ಕಳೆದ ಚುನಾವಣೆಯಲ್ಲಿ ಆಗಿರುವ ನೋವು ಹೋಗಲು ಮೂರು ವರ್ಷ ಬೇಕು. ಸಿಎಂ ವಿರುದ್ಧ ಗೆದ್ದು ಬಂದಿದ್ದು, ಅದನ್ನು ಜೀರ್ಣಿಸಿಕೊಳ್ಳಲು ಸಮಯ ಬೇಕಾಗಿದೆ ಎಂದರು.

ಉಪ ಚುನಾವಣೆ ವಿಚಾರವಾಗಿ ನಾನು ಹುಣಸೂರು ಜನತೆಗೂ ಏನೂ ಹೇಳಲ್ಲ. ದೇವೇಗೌಡರು ಮೈಸೂರಿಗೆ ಬಂದು ಜಿಟಿಡಿ ಎಲ್ಲಾದ್ರೂ ಹೋಗ್ಲಿ ಅವರನ್ನು ಕಟ್ಟಿ ಹಾಕಿದ್ದಿವಾ ಅಂದ್ರು, ಕುಮಾರಸ್ವಾಮಿ ಸಿಎಂ ವಿರುದ್ಧ ಗೆದ್ದವರನ್ನ ಸಿಎಂ ಮಾಡ್ಬೇಕು ಅಂತ ಕೇಳ್ತಾರೆ. ಅಂದ್ಮೇಲೆ ಅವರು ನನ್ನ ಮೇಲೆ ಎಷ್ಟರ ಮಟ್ಟಿಗೆ ಪ್ರೀತಿ ಇಟ್ಕೊಂಡಿದ್ದಾರೆ ಅಂತ ಗೊತ್ತಾಗೋಲ್ವಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Intro:ಜಿ‌.ಟಿ.ದೇವೇಗೌಡ ಪ್ರೆಸ್ ಮೀಟ್

Body:ಜಿ.ಟಿ.ದೇವೇಗೌಡ

Conclusion:ಜಿ.ಟಿ.ಡಿ
Last Updated : Sep 21, 2019, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.