ETV Bharat / state

ರೆಸಾರ್ಟ್​ನಲ್ಲಿ ತಂಗಿದ್ದ ಪ್ರವಾಸಿಗನ ಹಣ, ಚಿನ್ನಾಭರಣ ದೋಚಿದ ಖದೀಮರು! - Mysore crime latest news

ಜಿಲ್ಲೆಯ ಹೆಚ್.ಡಿ.ಕೋಟೆಯ ಬದನಗುಪ್ಪೆಯಲ್ಲಿರುವ ರೆಸಾರ್ಟ್​ನಲ್ಲಿ ತಂಗಿದ್ದ ಪ್ರವಾಸಿಯೋರ್ವರ ನಗದು, ಲ್ಯಾಪ್​ಟಾಪ್ ಸೇರಿದಂತೆ ಚಿನ್ನಾಭರಣ ಕಳ್ಳತನವಾಗಿವೆ.

Bichanahali
Bichanahali
author img

By

Published : Nov 23, 2020, 6:50 PM IST

ಮೈಸೂರು: ರೆಸಾರ್ಟ್​ನಲ್ಲಿ ವಾಸ್ತವ್ಯವಿದ್ದ ಪ್ರವಾಸಿಗರೊಬ್ಬರ ಚಿನ್ನಾಭರಣ, ಹಣ, ಲ್ಯಾಪ್​​ಟಾಪ್ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆಯ ಬದನಗುಪ್ಪೆಯಲ್ಲಿ ನಡೆದಿದೆ.

ಬದನಗುಪ್ಪೆ ಗ್ರಾಮದಲ್ಲಿರುವ ರೆಡ್ ಅರ್ಥ್ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರು ಮೂಲದ ಸುಧೀರ್ ಯಜವತ್ ಎಂಬ ಪ್ರವಾಸಿಗೆ ಸೇರಿದ ಸುಮಾರು 60 ಸಾವಿರ ರೂ. ನಗದು, ಚಿನ್ನದ ಸರ ಮತ್ತು ಲ್ಯಾಪ್​ಟಾಪ್ ಕಳ್ಳತನ ಆಗಿದೆ. ಸುಧೀರ್ ರಾತ್ರಿ ಊಟಕ್ಕೆ ತೆರಳಿದ್ದ ವೇಳೆ ಕಳ್ಳತನವಾಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಸೀಲನೆ ನಡೆಸಿದ್ದು, ರೆಸಾರ್ಟ್‌ನಲ್ಲಿದ್ದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುಕಲಾಗುತ್ತಿದೆ. ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.