ಮೈಸೂರು: ತಲಕಾಡು ನಿಸರ್ಗಧಾಮದಲ್ಲಿ ಈಜಲು ತೆರಳಿದ್ದ ಅಯ್ಯಪ್ಪ ಮಾಲಾಧಾರಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಸಂಕೇನಹಳ್ಳಿ ಗ್ರಾಮದ ನಿವಾಸಿ ನಟೇಶ್ (38) ಮೃತ ಮಾಲಾಧಾರಿ. ಸಂಕೇನಹಳ್ಳಿ ಗ್ರಾಮದಿಂದ 48 ಜನರು ಶಬರಿಮಲೆಗೆಂದು ಪ್ರಯಾಣ ಹೊರಟಿದ್ದರು. ಸಾರ್ವಜನಿಕರಿಗೆ ಶಬರಿಮಲೆ ಅನುಮತಿ ನಿರಾಕರಿಸಿರುವ ಹಿನ್ನೆಲೆ ತಲಕಾಡಿಗೆ ಪ್ರವಾಸ ಬಂದಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.