ಮೈಸೂರು : ಕೊರೊನಾ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರು, ಅರ್ಚಕರು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು.
ಕೊರೊನಾ ಹಿನ್ನೆಲೆ ಕಲಾವಿದರು, ಅರ್ಚಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಂಕಷ್ಟಕ್ಕೆ ಒಳಗಾಗಿದ್ದ ಕುಟುಂಬಗಳಿಗೆ ಸುತ್ತೂರು ಮಠ, ಅಮೆರಿಕದ ಅಕ್ಕ-ಕಾವೇರಿ ಕನ್ನಡ ಸಂಘ ಮತ್ತು ಮೂಲಚಂದ್ ಚಾರಿಟಬಲ್ ಟ್ರಸ್ಟ್ ಗಳು ನೀಡಿದ್ದ ಆಹಾರ ಪದಾರ್ಥಗಳು, ಧಾನ್ಯಗಳ ಕಿಟ್ ಗಳನ್ನು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಸಾಂಕೇತಿಕವಾಗಿ ವಿತರಿಸಿದರು.
![Sutturu shree](https://etvbharatimages.akamaized.net/etvbharat/prod-images/12:49_kn-mys-2-suttur-shree-food-kit-distribution-news-7208092_06062020124410_0606f_1591427650_651.jpg)
ಸುಮಾರು 650 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದ್ದು , ಪ್ರತಿ ಕುಟುಂಬಕ್ಕೆ ಅಕ್ಕಿ, ಬೇಳೆ, ಬೆಲ್ಲ, ಅಡುಗೆ ಎಣ್ಣೆ ಇನ್ನಿತರ ಸಾಮಗ್ರಿಗಳನ್ನು ವಿತರಿಸಿದರು.