ETV Bharat / state

ಇಂತಹ ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರೋದು ರಾಜ್ಯದ ದುರ್ದೈವ: ಸಿ.ಎಂ. ಇಬ್ರಾಹಿಂ - congress leader C.M. Ibrahim news

ಪರಸತಿ, ಪರಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಟ ಮಾಡ್ತಿದೆ. ಸಿಎಂಗೆ ತಕ್ಕನಾದ ಮಂತ್ರಿಗಳಿಲ್ಲ. ಇವರ ಮಧ್ಯೆ ಸಿಲುಕಿ ಕೇಶವಕೃಪ, ಬಸವ ಕೃಪ ಒದ್ದಾಡುತ್ತಿವೆ. ಇಂತಹ ನತದೃಷ್ಟ ಸಿಎಂ ನಮ್ಮ ರಾಜ್ಯಕ್ಕೆ ಸಿಕ್ಕಿರೋದು ರಾಜ್ಯದ ದುರ್ದೈವ ಎಂದು ಕಾಂಗ್ರೆಸ್​ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ
ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ
author img

By

Published : Mar 3, 2021, 8:56 PM IST

Updated : Mar 3, 2021, 9:44 PM IST

ಮೈಸೂರು: ರಾಸಲೀಲೆ ಕರ್ಮಕಾಂಡಗಳ ನಡುವೆ ರಾಜಕಾರಣ ಇದೆ. ಇಂತಹ ನತದೃಷ್ಟ ಮುಖ್ಯಮಂತ್ರಿ ರಾಜ್ಯಕ್ಕೆ ಸಿಕ್ಕಿರೋದು ರಾಜ್ಯದ ದುರ್ದೈವ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಘಟನೆಯನ್ನ ವ್ಯಂಗ್ಯವಾಗಿ ವಿರ್ಮರ್ಶಿಸಿದರು. ಪರಸತಿ, ಪರಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಟ ಮಾಡ್ತಿದೆ. ಸಿಎಂಗೆ ತಕ್ಕನಾದ ಮಂತ್ರಿಗಳಿಲ್ಲ. ಇವರ ಮಧ್ಯೆ ಸಿಲುಕಿ ಕೇಶವಕೃಪ, ಬಸವ ಕೃಪ ಒದ್ದಾಡುತ್ತಿವೆ. ಇದು ದಿಕ್ಕುತಪ್ಪಿದ ರಾಜಕಾರಣ. ಹಿಂದೆ ಜನ ಓಟು ಕೊಡಬೇಕಾದ್ರೆ ಕುಲ ಕಸಬು ನೋಡೋರು ಎಂದು ಛೇಡಿಸಿದರು.

ಕಾಂಗ್ರೆಸ್​ ಮುಖಂಡ ಸಿ.ಎಂ. ಇಬ್ರಾಹಿಂ

ಒಂದು ಎತ್ತು ತಗೋಬೇಕಾದ್ರು ಅದರ ತಳಿ ಯಾವುದು ಅಂತ ನೋಡ್ತಿವಿ. ರೇಸ್‌ನಲ್ಲಿ ಈ ಕುದುರೆಗೆ ದುಡ್ಡು ಕಟ್ಟೋಕು ಮುನ್ನ ಅದರ ಅಪ್ಪ ಅಮ್ಮ ಎಷ್ಟು ರೇಸ್ ಗೆದ್ದಿವೆ ಅಂತ ನೋಡ್ತಿವಿ. ಆದ್ರೆ ಈಗೀನ ರೇಸ್‌ ಕುದುರೆಗಳು ಎಷ್ಟು ದುಡ್ಡು ತಂದಿವೆ ಅಂತ ಮಾತ್ರ ನೋಡ್ತಾರೆ. ಇದು ಸರಿಯಾಗುತ್ತೆ ಅನ್ನೊ ನಂಬಿಕೆ ಇಲ್ಲ. ಆದ್ರೆ ಇದಕ್ಕಾಗಿ ಒಂದು ದೊಡ್ಡ ಕ್ರಾಂತಿ ಆಗಬೇಕಿದೆ. ಕ್ರಾಂತಿ ಆಗುತ್ತೆ ಅನ್ನೋ ನಂಬಿಕೆ ಇದೆ ಎಂದರು.

ಕಾಂಗ್ರೆಸ್ ನಲ್ಲಿ ಉಳಿಯಲು ಡಿಮ್ಯಾಂಡ್:

ನಾನು ಕಾಂಗ್ರೆಸ್‌ನಲ್ಲಿ ಉಳಿಯೋಕೆ ಒಂದೇ ಡಿಮ್ಯಾಂಡ್ ಇದೆ. ಕಾಂಗ್ರೆಸ್‌ನಲ್ಲಿ ಸಜ್ಜನರಿಗೆ ಅವಕಾಶ ಕೊಡುವ ನಿರ್ಧಾರ ಕೈಗೊಳ್ಳಬೇಕು. ಸಜ್ಜನರಿಗೆ ಅಧಿಕಾರ ಕೊಡಬೇಕು, ಅನ್ನೊದಷ್ಟೆ ನನ್ನ ಡಿಮ್ಯಾಂಡ್ ಎಂದರು.

ನಾನು ಸಿದ್ದರಾಮಯ್ಯ ರಾಜಕೀಯ ವಿಚಾರ ಮಾತ್ರ ಮಾತನಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ವ್ಯಾಪಾರ ಇಲ್ಲ. ನಾನು ದೇವೇಗೌಡರನ್ನು ಭೇಟಿ ಮಾಡಿದ್ದೆ, ಅಡ್ವಾಣಿ ಮನೆಗೂ ಹೋಗಿದ್ದೆ. ವಿಶ್ವಾಸಕ್ಕೆ ಜಾತಿ ಪಕ್ಷ ಇಲ್ಲ. ಆರ್‌ಎಸ್‌ಎಸ್‌‌ನಲ್ಲೂ ನನಗೆ ಸ್ನೇಹಿತರಿದ್ದಾರೆ. ಆದ್ರೆ ಅವರ ವಿಚಾರಧಾರೆ ಬೇರೆ ನಮ್ಮದೆ ಬೇರೆ ಇರುತ್ತೆ ಎಂದರು.

ಒಂದು ವರ್ಷ ಆದ್ಮೇಲೆ‌ ಸಿದ್ದರಾಮಯ್ಯ ನಾವು ಭೇಟಿಯಾಗಿದ್ದೇವೆ. ದೆಹಲಿಗೆ ಹೋಗಿ ಮೇಡಂ ಅವರನ್ನ ಭೇಟಿ ಮಾಡಿ ಬರ್ತಿನಿ. ಆ ನಂತರ ನನ್ನ ನಿರ್ಧಾರ ತಿಳಿಸುವುದಾಗಿ ಹೇಳಿದ್ದೇನೆ ಎಂದು ಹೇಳಿದರು.

ಓದಿ: ಈಟಿವಿ ಭಾರತ ವರದಿಗೆ ಶಾಸಕ ಡಾ. ಯತೀಂದ್ರ ಸ್ಪಂದನೆ: ವಿಶೇಷ ಚೇತನ ಮಕ್ಕಳ ಕುಟುಂಬ ಭೇಟಿ

ದೇಶಕ್ಕೆ ಒಳ್ಳೆಯದಾಗಬೇಕು ಅನ್ನೋದೆ ನಮ್ಮ ಉದ್ದೇಶ. ಕಾಂಗ್ರೆಸ್​​ನಲ್ಲಿ ಉಳಿಯೋದು ಕಾಲಾಯ ತಸ್ಮೈ ನಮಃ. ನಮಗೂ ಸಿದ್ದರಾಮಯ್ಯನವರಿಗೂ ಸ್ನೇಹ ಸಂಬಂಧ ಇದ್ದೆ ಇರುತ್ತೆ. ರಾಜಕೀಯ ನಡೆಗಳನ್ನ ಮುಂದೆ ನೋಡೋಣ. ಆದ್ರೆ ಸದ್ಯ ಮೂರು ಪಕ್ಷಗಳ ಕಥೆ ಹಾಗೆಯೇ ಇದೆ. ಯಾವ ರೀತಿ ಅಂದ್ರೆ ಸಿನಿಮಾ ಟಾಕಿಸ್‌‌ನಲ್ಲಿ ಕರೆಂಟ್ ಹೋದಾಗ ಪ್ರೇಕ್ಷಕರ ಸ್ಥಿತಿ ರೀತಿ. ನಾನು ಡೆಲ್ಲಿಗೆ ಪದೇ ಪದೇ ಹೋಗೋಲ್ಲ. ಕುದುರೆ ಚೆನ್ನಾಗಿದ್ರೆ ಖರೀದಿ ಮಾಡೋರು ಮನೆಗೆ ಬರ್ತಾರೆ ಅನ್ನೋರು ನಾವು‌. ಹಾಗಾಗಿ ಅವರು ಯಾವಾಗ ಕರಿತಾರೆ ಅವಾಗ ಹೋಗ್ತಿನಿ ಎಂದು ತಿಳಿಸಿದರು.

ಈಗಿನ ರಾಜಕಾರಣಿಗಳು ಹೈಬ್ರಿಡ್‌ ತಳಿಗಳು. ನಾಟಿ ತಳಿಗಳು ಈಗ ಸಿಕ್ತಾ ಇಲ್ಲ. ಮರ್ಯಾದಸ್ಥರು ಸಿಗೋದು ಈಗ ವಿರಳವಾಗಿದೆ. ತನ್ವೀರ್ ಸೇಠ್, ಹ್ಯಾರೀಸ್‌ರಿಂದ ಸಿ.ಎಂ ಇಬ್ರಾಹಿಂ ಭೇಟಿ ವಿಚಾರ ಮಾತನಾಡಿ, ಮೇಯರ್ ಮೈತ್ರಿ ವಿಚಾರದ ಸಂಬಂಧ ಅವರನ್ನ ಕರೆದಿದ್ದೆ. ನಾನೇ ಅವರನ್ನು ಮನೆಗೆ ಕರೆದು ಮಾತುಕತೆ ನಡೆಸಿದ್ದೆ. ಇದೊಂದು ಸಣ್ಣ ವಿಚಾರ, ಯಾಕೆ ಇಷ್ಟು ದೊಡ್ಡದು ಮಾಡಿಕೊಂಡಿದ್ದೀರಾ ಎಂದು ಹೇಳಿದೆ. ಮಾತುಕತೆ ನಡೆಸಿ ನಾನು ಕೂಡ ಇದರ ಮಾಹಿತಿ ಪಡೆದುಕೊಂಡೆ. ನಾನು ಕಾಂಗ್ರೆಸ್ ಮುಖಂಡರನ್ನ ಕರೆದು ವಿಶ್ವಾಸದಿಂದ ಮಾತುಕತೆ ನಡೆಸಿದೆ ಎಂದು ಹೇಳಿದರು.

Last Updated : Mar 3, 2021, 9:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.