ETV Bharat / state

ಚುನಾವಣೆ ಬಂದ್ರೆ ಕುಮಾರಸ್ವಾಮಿಗೆ ಕಣ್ಣೀರು ಬರುತ್ತೆ : ಶ್ರೀರಾಮುಲು - ಕುಮಾರಸ್ವಾಮಿಗೆ ಶ್ರೀರಾಮುಲು ಟಾಂಗ್​

ಹುಣಸೂರು ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರಿದ್ದು, ಇಂದು ಕೂಡ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ವಿಶ್ವನಾಥ್​ ಪರ ಪ್ರಚಾರ ನಡೆಸಿದರು.

Sriramulu
ಶ್ರೀರಾಮುಲು
author img

By

Published : Nov 30, 2019, 7:39 PM IST

ಮೈಸೂರು: ಕುಮಾರಸ್ವಾಮಿ ಅವರಿಗೆ ಚುನಾವಣೆ ಬಂದ್ರೆ ಮಾತ್ರ ಜನ ನೆನಪಾಗುತ್ತಾರೆ ಹಾಗೂ ಚುನಾವಣೆ ಸಂದರ್ಭದಲ್ಲೇ ಕಣ್ಣೀರು ಬರುತ್ತದೆ ಎಂದು ಸಚಿವ ಶ್ರೀರಾಮುಲು ಹೆಚ್​ಡಿಕೆಗೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು

ಬಿಜೆಪಿಯ ಯಾವೊಬ್ಬರಿಗೂ ಮಾನ ಇಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಹುಣಸೂರಿನಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮುಲು, ಕುಮಾರಸ್ವಾಮಿ ಒಂಥರಾ ಹಿಟ್​ ಅಂಡ್​ ರನ್​ ಮಾಡೋ ರಾಜಕಾರಣಿಯಲ್ಲಿ ಒಬ್ಬರು. ಚುನಾವಣೆ ಬಂದ್ರೆ ಮಾತ್ರ ಜನ ನೆನಪಾಗುತ್ತಾರೆ ಹಾಗೂ ಚುನಾವಣೆ ಸಂದರ್ಭದಲ್ಲೇ ಅವರಿಗೆ ಕಣ್ಣೀರು ಬರುತ್ತದೆ. ಚುನಾವಣೆ ಗೆದ್ದ ನಂತರ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಇರ್ತಾರೆ ಎಂದರು.

ಅಲ್ಲದೆ ಕಾವಿ ಧರಿಸುವವರ ಬಗ್ಗೆ ಅವರು ಮಾತನಾಡುವುದು ಸರಿಯಲ್ಲ. ಕಾವಿಯನ್ನು ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಸ್ವಾಮೀಜಿ, ಪೇಜಾವರ ಸ್ವಾಮೀಜಿ ಹಾಗೂ ವಾಲ್ಮೀಕಿ ಸ್ವಾಮೀಜಿ ಎಲ್ಲರೂ ಕಾವಿ ಧರಿಸುತ್ತಾರೆ. ಕಾವಿಗೆ ಅವಮಾನ ಮಾಡುವುದು ತಪ್ಪು , ಅವರೇ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ರಾಜ್ಯದ 15 ಕ್ಷೇತ್ರದಲ್ಲಿ ಗೆಲ್ಲುತ್ತದೆ. ಇನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಒಳ ಒಪ್ಪಂದ ಮಾಡಿಕೊಂಡಿದ್ದು , ಮತ್ತೆ ಸರ್ಕಾರ ರಚಿಸುವ ಕನಸು ಕಾಣುತ್ತಿದೆ, ಸ್ವಲ್ಪ ದಿನ ಕಳೆದರೆ ಸತ್ಯ ಗೊತ್ತಾಗುತ್ತದೆ, ಭ್ರಮೆ ದೂರ ಆಗುತ್ತದೆ ಎಂದರು.

Intro:ಮೈಸೂರು: ಹುಣಸೂರು ಉಪ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿಗೆ ಟಾಂಗ್ ಕೊಟ್ಟ ಶ್ರೀ ರಾಮುಲು.Body:

ಹುಣಸೂರು ಉಪ ಚುನಾವಣೆ ದಿನದಿಂದ ದಿನಕ್ಕೆ ರಂಗೇರಿದ್ದು , ಹಿರಿಯ ನಾಯಕರುಗಳು ತಮ್ಮ ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಪ್ರಚಾರದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ನೀಡಿದ ಶ್ರೀ ರಾಮುಲು ಕುಮಾರಸ್ವಾಮಿ ಅವರಿಗೆ ಚುನಾವಣೆ ಬಂದರೆ ಮಾತ್ರ ಜನ ನೆನಪಾಗುತ್ತಾರೆ ಹಾಗೂ ಚುನಾವಣೆ ಸಂದರ್ಭದಲ್ಲೇ ಕಣ್ಣೀರು ಬರುತ್ತದೆ ಅಲ್ಲದೆ ಕಾವಿ ಧರಿಸುವವರ ಬಗ್ಗೆ ಮಾತಾನಾಡುವುದು ಸರಿಯಲ್ಲ , ಕಾವಿಯನ್ನು ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಸ್ವಾಮೀಜಿ, ಪೇಜಾವರ ಸ್ವಾಮೀಜಿ ಹಾಗೂ ವಾಲ್ಮೀಕಿ ಸ್ವಾಮೀಜಿ ಎಲ್ಲರೂ ಕಾವಿ ಧರಿಸುತ್ತಾರೆ. ಕಾವಿಗೆ ಅವಮಾನ ಮಾಡುವುದು ತಪ್ಪು , ಅವರೇ ಇದನ್ನು ಅರ್ಥ ಮಾಡಿಕೊಳ್ಳಬೇಕು ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ನೀಡಿದರು. ಹಾಗೂ ಬಿಜೆಪಿ ಪಕ್ಷವು ರಾಜ್ಯದ ೧೫ ಕ್ಷೇತ್ರದಲ್ಲಿ ಗೆಲ್ಲುತ್ತದೆ. ಇನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಒಳ ಒಪ್ಪಂದ ಮಾಡಿಕೊಂಡಿದ್ದು , ಮತ್ತೆ ಸರ್ಕಾರ ರಚಿಸಲು ಕನಸು ಕಾಣುತ್ತಿದೆ, ಸ್ವಲ್ಪ ದಿನ ಕಳೆದರೆ ಸತ್ಯ ಗೊತ್ತಾಗುತ್ತದೆ, ಭ್ರಮೆ ದೂರ ಆಗುತ್ತದೆ ಎಂದು ನೇರವಾಗಿ ಹೇಳಿಕೆ ನೀಡಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.