ETV Bharat / state

ಮೈಸೂರು ದಸರಾ 2022: ಗಣೇಶ ಹಬ್ಬದ ನಿಮಿತ್ತ ಗಜಪಡೆಗೆ ವಿಶೇಷ ಪೂಜೆ

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಮೊದಲ ಹಂತದ ಅಭಿಮನ್ಯು ನೇತೃತ್ವದ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಮತ್ತು ಲಕ್ಷ್ಮಿ ಆನೆಗಳಿಗೆ ಅರಮನೆ ಮೈದಾನದ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಸಾಂಪ್ರದಾಯಿಕವಾಗಿ ಅರಣ್ಯ ಇಲಾಖೆಯಿಂದ ಪೂಜೆ ಸಲ್ಲಿಸಲಾಯಿತು.

special-puja
ಗಣೇಶ ಹಬ್ಬದ ಪ್ರಯುಕ್ತ ಗಜಪಡೆಗೆ ವಿಶೇಷ ಪೂಜೆ
author img

By

Published : Aug 31, 2022, 2:12 PM IST

ಮೈಸೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣಪತಿ ರೂಪದ ಗಜಪಡೆಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಹಬ್ಬ ದಸರಾ ಮಹೋತ್ಸವದ ಭಾಗವಹಿಸಲು ಆಗಮಿಸಿರುವ ಮೊದಲ ಹಂತದ ಅಭಿಮನ್ಯು ನೇತೃತ್ವದ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಮತ್ತು ಲಕ್ಷ್ಮಿ ಗಜಗಳಿಗೆ ಅರಮನೆ ಮೈದಾನದ ಕೊಡಿ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಸಾಂಪ್ರದಾಯಿಕವಾಗಿ ಅರಣ್ಯ ಇಲಾಖೆಯಿಂದ ಪೂಜೆ ನೆರವೇರಿಸಲಾಯಿತು.

ಗಣೇಶ ಹಬ್ಬದ ಪ್ರಯುಕ್ತ ಗಜಪಡೆಗೆ ವಿಶೇಷ ಪೂಜೆ

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಕರಿಕಾಳನ್ ಇಂದು ಗಣೇಶ ಚತುರ್ಥಿ ದಿನ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಎರಡನೇ ಹಂತದ 5 ಆನೆಗಳು ಸೆಪ್ಟೆಂಬರ್ 7 ರಂದು ಅರಮನೆಗೆ ಆಗಮಿಸಲಿವೆ. ಅವುಗಳ ತೂಕ ಹಾಕಿ ಮತ್ತು ಮೊದಲ ಹಂತದ ಗಜಪಡೆಯನ್ನು ಸಹ ತೂಕ ಹಾಕಲಾಗುವುದು. ಅನಂತರ ತಾಲೀಮನ್ನು ಆರಂಭಿಸಲಾಗುವುದು. ಎಲ್ಲ ಆನೆಗಳು ಆರೋಗ್ಯವಾಗಿವೆ. ಈ ಬಾರಿ ಅಭಿಮನ್ಯು ಆನೆ ಜಂಬೂಸವಾರಿ ಹೊರಲಿದೆ ಎಂದು ಮಾಹಿತಿ ನೀಡಿದರು.

ಆನೆಗಳಿಗೆ ನಿರಂತರ ತಾಲೀಮು : ಮೊದಲ ಹಂತದ 9 ಗಜಪಡೆಗೆ ತಾಲೀಮು ಆರಂಭವಾಗಿದ್ದು, ಎರಡನೇ ಹಂತದ ಗಜಪಡೆ ಬಂದ ನಂತರ ಪಾದಪೂಜೆ ಮಾಡಿ ಬರಮಾಡಿಕೊಳ್ಳಲಾಗುವುದು. ನಂತರ ಎಲ್ಲ ಆನೆಗಳನ್ನು ಒಟ್ಟಾಗಿ ತಾಲೀಮಿಗೆ ಕರೆದೊಯಲಾಗುವುದು.

ಅಂಬಾರಿ ಹೊರುವ ಆನೆ ಅಭಿಮನ್ಯುಗೆ ಸುಮಾರು ಸಾವಿರ ಕೆಜಿಗೂ ಹೆಚ್ಚು ಭಾರ ಹೊರಿಸಲಾಗುತ್ತಿದೆ. ಹೊಸದಾಗಿ ದಸರಾ ಗಜಪಡೆಗೆ ಸೇರಿರುವ ಆನೆಗಳಾದ ಗೋಪಾಲಸ್ವಾಮಿ ಮತ್ತು ಧನಂಜಯ ಆನೆಗಳಿಗೂ ಸಹ ಭಾರ ಹೊರುವ ತಾಲೀಮು ನೀಡಲಾಗುತ್ತಿದೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.

ಪೂಜೆಯ ವೇಳೆ ಮುಖ್ಯ ಅರಣ್ಯಾಧಿಕಾರಿಗಳು ಹಾಗೂ ಮಾವುತರು - ಕಾವಾಡಿಗಳು ಹಾಗೂ ಕುಟುಂಬದವರು ಭಾಗವಹಿಸಿದ್ದರು.

ಇದನ್ನೂ ಓದಿ : ತೋಟದಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಿದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.