ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣರಾಜ ಕ್ಷೇತ್ರದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಶಾಲೆಯ ಮಟಗಟ್ಟೆಯಲ್ಲಿ ಮತದಾರರಿಗೆ ಆರತಿ ಮಾಡಿ ಬರಮಾಡಿಕೊಳ್ಳಲಾಯಿತು.
ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಮಟಗಟ್ಟೆಯನ್ನು ಮಹರ್ಷಿ ಆಡಳಿತ ಮಂಡಳಿಯವರು ಬಾಳೆ ಕಂದು, ಹಸಿರು ತೋರಣ ಹಾಗೂ ರಂಗೋಲಿಯಿಂದ ಅಲಂಕರಿಸಿದ್ದಾರೆ.
ಮತದಾನ ಪ್ರಮಾಣ ಹೆಚ್ಚಿಸಲು ಸಂದೇಶ ನೀಡುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಹಬ್ಬ ಎಂದು ಆಚರಿಸಿ ವಿಶೇಷವಾಗಿ ಮೊದಲ ಬಾರಿ ಮತದಾನಕ್ಕೆ ಬಂದಿರುವವರನ್ನು ಆರತಿ ಎತ್ತಿ ಸ್ವಾಗತಿಸಲಾಗುತ್ತಿದೆ.