ಮೈಸೂರು: ಹುಣಸೂರು ಉಪ ಚುನಾವಣೆ ಖರ್ಚಿಗೆ ಕೈ ಅಭ್ಯರ್ಥಿಗೆ ಬಾಲಕಿಯೊಬ್ಬಳು ತಾನು ಕೂಡಿಟ್ಟಿದ್ದ ಹಣವನ್ನು ನೀಡಿದ ಘಟನೆ ಹುಣಸೂರು ತಾಲೂಕಿನ ಯಶೋಧಪುರ ಗ್ರಾಮದಲ್ಲಿ ನಡೆದಿದೆ.
ದಿನೇ ದಿನೆ 15 ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಜೋರಾಗುತ್ತಿದ್ದು, ಹುಣಸೂರು ಕ್ಷೇತ್ರದ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಯಶೋಧಪುರ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಿದ್ರು. ಈ ವೇಳೆ ಗ್ರಾಮದ ವರ್ಷಿಣಿ ಎಂಬ ಬಾಲಕಿ ತಾನು ಕೂಡಿಟ್ಟಿದ್ದ ಹಣವನ್ನು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ಗೆ ಚುನಾವಣೆಯ ಪ್ರಚಾರದ ಖರ್ಚಿಗೆ ತೆಗೆದುಕೊಳ್ಳುವಂತೆ ಹೇಳಿದ್ದಾಳೆ. ಅಲ್ಲದೆ ನೀವು ಗೆಲ್ಲಬೇಕು ಎಂದು ಹಣ ನೀಡಿದ್ದಾಳೆ.