ಮೈಸೂರು: ಸರಳ ಜಂಬೂಸವಾರಿಯ ಹಿನ್ನಲೆಯಲ್ಲಿ ಅರಮನೆ ಸುತ್ತ ಇರುವ ರಸ್ತೆಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನಲೆಯಲ್ಲಿ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಇದರ ಫೋಟೋ ಜಲಕ್ ಇಲ್ಲಿದೆ.
ಜಂಬೂಸವಾರಿಯ ಸಂದರ್ಭದಲ್ಲಿ ಲಕ್ಷಾಂತರ ಜನ ರಸ್ತೆ ಬದಿಯಲ್ಲಿ ನಿಂತು ವಿಜಯದಶಮಿಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದ ದಿನ
ಆದರೆ ಇಂದು ಕೋವಿಡ್ ಹಿನ್ನಲೆಯಲ್ಲಿ ಸರಳ ದಸರಾ ಆಚರಣೆ
ದಸರಾ ಸಂಭ್ರಮಕ್ಕೂ ಅಡ್ಡಿಯಾದ ಕೊರೊನಾ ಮಹಾಮಾರಿ
ಅರಮನೆಯ ಸುತ್ತ ಇರುವ ಕೋಟೆ ಆಂಜನೇಯ ರಸ್ತೆ, ಚಿಕ್ಕಗಡಿಯಾರ, ಕೆ.ಆರ್.ವತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ
ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ ಪೋಲಿಸ್ ಇಲಾಖೆ
ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದು ಎಲ್ಲಾ ಕಡೆ ಖಾಕಿ ಭದ್ರತೆ
ಅರಮನೆ ಸುತ್ತ ರಸ್ತೆಗಳು ಖಾಲಿ ಖಾಲಿ