ETV Bharat / state

70ರ ವಯಸ್ಸಿನಲ್ಲೂ ವಿಶ್ವನಾಥ್ ಆ ಚಿತ್ರದ ಹೀರೋ: ಸಾ. ರಾ. ಮಹೇಶ್ ಸಿಡಿಸಿದ್ರು ಆಡಿಯೋ ಬಾಂಬ್​ ​ - ಸುಪ್ರೀಂ ಕೋರ್ಟ್

ಇಂದು ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ವಿಚಾರಣೆ ನಡೆಯುತ್ತಿದ್ದು, ಇತ್ತ ಜೆಡಿಎಸ್​ ಶಾಸಕ ಸಾ.ರಾ. ಮಹೇಶ್​ ಅವರು ಅನರ್ಹ ಶಾಸಕ ಹೆಚ್​. ವಿಶ್ವನಾಥ್​ ವಿರುದ್ಧ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ವಿಶ್ವನಾಥ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

sa.ra. mahesh , ಸಾ.ರಾ. ಮಹೇಶ್​
author img

By

Published : Sep 23, 2019, 12:57 PM IST

ಮೈಸೂರು: ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ಏನಾಗುವುದೋ ಎಂಬ ಚಿಂತೆಯಲ್ಲಿ ಅನರ್ಹ ಶಾಸಕರಿದ್ದಾರೆ. ಇತ್ತ ಅನರ್ಹ ಶಾಸಕರಲ್ಲಿ ಒಬ್ಬರಾಗಿರುವ ಹೆಚ್. ವಿಶ್ವನಾಥ್​ ವಿರುದ್ಧ ಶಾಸಕ ಸಾ.ರಾ. ಮಹೇಶ್​ ಆಡಿಯೋ ಸಿಡಿ ಬಾಂಬ್​ವೊಂದನ್ನು ಸಿಡಿಸಿದ್ದಾರೆ.

ಅನರ್ಹ ಶಾಸಕ ಹೆಚ್​ ವಿಶ್ವನಾಥ್​ ವಿರುದ್ಧ ಆಡಿಯೋ ಬಿಡುಗಡೆ ಮಾದಿದ ಜೆಡಿಎಸ್​ ಶಾಸಕ ಸಾ.ರಾ. ಮಹೇಶ್

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಜೆಡಿಎಸ್​ ಶಾಸಕ ಸಾ.ರಾ. ಮಹೇಶ್​, ಹೆಚ್​ ವಿಶ್ವನಾಥ್​ ವಿರುದ್ಧ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ವಿಶ್ವನಾಥ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, 70ರ ವಯಸ್ಸಿನಲ್ಲೂ ವಿಶ್ವನಾಥ್​ ಅಶ್ಲೀಲ ಚಿತ್ರದ ಹೀರೋ ಹಾಗೂ ಬ್ಲೂ ಬಾಯ್ ಆಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಅವರ ರಾಸಲೀಲೆಗೆ ಸಂಬಂಧಿಸಿದ ವಿಡಿಯೋ ಸಹ ನನ್ನ ಬಳಿ ಇದೆ. ಅದರ ಹೀರೋಯಿನ್ ಯಾರು ಎಂದು ನನಗೆ ಗೊತ್ತು, ಅವರ ಮೊಬೈಲ್ ನಂಬರ್ ಕೂಡ ನನ್ನ ಬಳಿ ಇದೆ. ಸಮಯ ಬಂದಾಗ ವಿಡಿಯೋ ಬಿಡುಗಡೆ ಮಾಡುತ್ತೇನೆ. ಈಗ ಆಡಿಯೋ ಸಿಡಿ ಮಾತ್ರ ಬಿಡುಗಡೆ ಮಾಡಿದ್ದೇನೆ ಎಂದಿದ್ದಾರೆ.

ಇನ್ನು, ವಿಶ್ವನಾಥ್ ಓರ್ವ ಅತೃಪ್ತ ಪ್ರೇತಾತ್ಮ, ಅವರು ತಪ್ಪು ಮಾಡಿಲ್ಲ ಎಂದಾದರೆ ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಲಿ ಎಂದು ಸಾ. ರಾ. ಮಹೇಶ್​ ಸವಾಲು ಹಾಕಿದ್ದಾರೆ. ವಿಶ್ವನಾಥ್ ರಾಜೀನಾಮೆ ನೀಡಿದ್ದು ಹಣ ಮತ್ತು ಅಧಿಕಾರದ ಅಸೆಗಾಗಿ ಎಂದು ಕಿಡಿಕಾರಿದರು.

ಭಾನುವಾರ ಅನರ್ಹ ಶಾಸಕ ಹೆಚ್‌. ವಿಶ್ವನಾಥ್ ಅವರು ಸುದ್ದಿಗೋಷ್ಟಿ ನಡೆಸಿ ಸಾ.ರಾ. ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಸಾ‌.ರಾ. ಮಹೇಶ್ ಅವರು ವಿಶ್ವನಾಥ್​ ಅವರಿಗೆ ತಿರುಗೇಟು ನೀಡಿದ್ದಾರೆ.

Intro:ಮೈಸೂರು: ೭೦ ನೇ ವಯಸ್ಸಿನಲ್ಲೂ ವಿಶ್ವನಾಥ್ ಬ್ಲೂ ಫಿಲ್ಮ್ ಹೀರೊ ಹಾಗೂ ಬ್ಲೂ ಬಾಯ್ ಎಂದು ಸಾ.ರಾ.ಮಹೇಶ್ ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

Body:ನೆನ್ನೆ ಅನರ್ಹ ಶಾಸಕ ಹೆಚ್‌. ವಿಶ್ವನಾಥ್ ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಯಾಗಿ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಾ‌.ರಾ. ವಿಶ್ವನಾಥ್ ಬ್ಲೂ ಫಿಲ್ಮ್ ಹೀರೋ ೭೦ನೇ ವಯಸ್ಸಿನಲ್ಲೂ ಬ್ಲೂ ಬಾಯ್‌.‌
ಈ ವಯಸ್ಸಿನಲ್ಲು ಅವರ ಬ್ಲೂ ವಿಡಿಯೋ ನನ್ನಲಿದೆ. ಅದರ ಹಿರೋಯಿನ್ ಯಾರು ಎಂದು ನನಗೆ ಗೊತ್ತು ಅವರ ಮೊಬೈಲ್ ನಂಬರ್ ನನ್ನ ಬಳಿ ಇದೆ.
ಸಮಯ ಬಂದಾಗ ವಿಡಿಯೋ ಬಿಡುಗಡೆ ಮಾಡುತ್ತೇನೆ.
ಈಗ ಆಡಿಯೋ ಸಿಡಿ ಮಾತ್ರ ಬಿಡುಗಡೆ ಮಾಡಿದ್ದೇನೆ ಎಂದ ಸಾ.ರಾ.ಮಹೇಶ್,
ವಿಶ್ವನಾಥ್ ಒಬ್ಬ ಅತೃಪ್ತ ಪ್ರೇತಾತ್ಮ ನಾನು ತಪ್ಪು ಮಾಡಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ಅಣೆ ಮಾಡಲು ಹೇಳಿದ್ದೇನೆ. ‌ವಿಶ್ವನಾಥ್ ಗೆ ಮನಸಾಕ್ಷಿ ಇದ್ದರೆ ಚಾಮುಂಡಿ ಬೆಟ್ಟಕ್ಕೆ ಬಂದು ಅಣೆ ಮಾಡಲಿ ಎಂದ ಸಾ.ರಾ.ಮಹೇಶ್,
ವಿಶ್ವನಾಥ್ ರಾಜೀನಾಮೆ ನೀಡಿದ್ದು ಹಣ ಮತ್ತು ಅಧಿಕಾರದ ಅಸೆಗಾಗಿ ಎಂದು ವೇಗ ನಡೆಸಿದ ಸಾ.ರಾ.ಮಹೇಶ್ ಸುಪ್ರೀಂ ಕೋರ್ಟ್ ನಲ್ಲಿ ನಮಗೆ ನ್ಯಾಯ ದೊರಕುತ್ತದೆ ಎಂದು ವಿಶ್ವಾಸವಿದೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.