ETV Bharat / state

ಮನೆಗೆ ನುಗ್ಗಿದ ದರೋಡೆಕೋರರು : ಕುಟುಂಬಸ್ಥರ ಕೈ-ಕಾಲು ಕಟ್ಟಿ ಹಾಕಿ ಚಿನ್ನ, ನಗದು ದೋಚಿ ಪರಾರಿ...!

ಹುಣಸೂರು ಪಟ್ಟಣದಲ್ಲಿರುವ ಸುಮನ್ ಫಂಕ್ಷನ್ ಹಾಲ್‌ ಮಾಲೀಕರ ಮನೆಗೆ ನುಗ್ಗಿದ ದರೋಡೆಕೋರರು, ಮನೆಯ ಸದಸ್ಯರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ನಗದು, ಚಿನ್ನವನ್ನು ಸೋಚಿ ಪರಾರಿಯಾಗಿದ್ದಾರೆ.

robbery at mysore
ಮೈಸೂರು ದರೊಡೆ ಪ್ರಕರಣ
author img

By

Published : Jul 27, 2021, 10:33 AM IST

Updated : Jul 27, 2021, 12:24 PM IST

ಮೈಸೂರು: ಮನೆಗೆ ನುಗ್ಗಿ ಮನೆ ಸದಸ್ಯರನ್ನು ಕಟ್ಟಿಹಾಕಿ ಹಣ ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿರುವ ಘಟನೆ ಹುಣಸೂರು ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ.

ಹುಣಸೂರು ಪಟ್ಟಣದಲ್ಲಿರುವ ಸುಮನ್ ಫಂಕ್ಷನ್ ಹಾಲ್‌ ಮಾಲೀಕರ ಮನೆಗೆ ನುಗ್ಗಿದ ದರೋಡೆಕೋರರು, ಮನೆಯ ಸದಸ್ಯರನ್ನು ಕಟ್ಟಿಹಾಕಿ ಮನೆಯಲ್ಲಿದ್ದ 6 ಲಕ್ಷ ಹಣ, ಅರ್ಧ ಕೆ.ಜಿ. ಚಿನ್ನವನ್ನು ಹೊತ್ತು ಪರಾರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿರೋಧ ತೋರಿದ ಮನೆಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ನಸ್ರತ್ ಉನ್ನೀಸಾ, ಮಮ್ತಾಜ್ ಅಹಮದ್, ಆಯಿಷಾ ಅಂಜುಂ, ಗಜಾಲತ್ ತರನಂ ಸೇರಿ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ದಾಳಿ: 6 ಆರೋಪಿಗಳನ್ನು ಬಂಧಿಸಿ, 1 ಕೋಟಿ ಮೌಲ್ಯದ ಡಗ್ಸ್ ಜಪ್ತಿ ಮಾಡಿದ ಸಿಸಿಬಿ

ಯಾರೋ ಗೊತ್ತಿರುವವರೇ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿದ್ದಾರೆ. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ

Last Updated : Jul 27, 2021, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.