ಮೈಸೂರು: ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಹಣ-ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಅಲ್ಲಿ ವಾತಾವರಣ ಹಾಗಿಲ್ಲ, ಬದಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ಓದಿ: ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ
ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಮಸ್ಕಿಯಲ್ಲಿ ಬಸವನಗೌಡ ಪಾಟೀಲ್‌ಗೆ ಒಳ್ಳೆಯ ಹೆಸರಿದ್ದು, ಕೇವಲ 250 ಮತಗಳಿಂದ ಸೋತಿದ್ದಾರೆ. ಸಿಂದಗಿಯಲ್ಲಿ ಮನಗೂಳಿ ಪುತ್ರನಿಗೆ ಟಿಕೆಟ್ ನೀಡುವ ಚಿಂತನೆ ಇದೆ. ಬೆಳಗಾವಿ, ಬಸವಕಲ್ಯಾಣ ಟಿಕೆಟ್ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಸಿಡಿ ಪ್ರಕರಣ ಒಂದೇ ಅಲ್ಲ ಬಿಜೆಪಿಯ ಕೆಲ ಬೆಳವಣಿಗೆಗಳು ಉಪಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿಯವರು ನಾವು ದೇಶ ಭಕ್ತರು, ರಾಮ ಭಕ್ತರು ಅಂತಾರೆ. ಆದರೆ, ಅವರ ಕೆಟ್ಟ ಕೆಲಸಗಳನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಹೇಳಿದರು. ಅಶ್ಲೀಲ ಚಿತ್ರಗಳ ವೀಕ್ಷಣೆ ಬಿಜೆಪಿಗರಿಗೆ ಅಭ್ಯಾಸವಾಗಿದೆ. ಬಿಜೆಪಿ ನಾಯಕರು ವಿಪಕ್ಷಗಳನ್ನ ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದರಂತೆ ಸಿಡಿ ವಿಚಾರದಲ್ಲಿ ನಮ್ಮ ಪಕ್ಷದ ಅಧ್ಯಕ್ಷರ ಮೇಲೂ ಷಡ್ಯಂತ್ರ ನಡೆಯುತ್ತಿರಬಹುದು ಎಂದರು.
ಶಾಸಕ ತನ್ವೀರ್ ಸೇಠ್ ಬೆಂಬಲಿಗರ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗುವುದು ತಪ್ಪು. ಅಂದು ನಡೆದದ್ದು ಆಕಸ್ಮಿಕವಾದ ಘಟನೆ. ಸತ್ಯಾಸತ್ಯತೆ ತಿಳಿಯಲು ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಇಂದು ಮತ್ತೆ ಜನ ಸೇರಿಸಿದ್ದು ತಪ್ಪು ಎಂದರು.