ETV Bharat / state

ಪಾರಂಪರಿಕ ಶೈಲಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ : ವೈಶಿಷ್ಟ್ಯತೆಗಳು ಹಲವು - ಪಾರಂಪರಿಕ ತಜ್ಞ ಪ್ರೊಫೆಸರ್ ರಂಗರಾಜು

ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ನಮ್ಮ ಫೌಂಡೇಷನ್​ ವತಿಯಿಂದ ನಗರದಲ್ಲಿ ಪಾರಂಪರಿಕ ಮಾದರಿಯಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ.

ಮೈಸೂರಿನಲ್ಲಿ ನಿರ್ಮಾಣವಾದ ಪಾರಂಪರಿಕ ಶೌಚಾಲಯ
ಮೈಸೂರಿನಲ್ಲಿ ನಿರ್ಮಾಣವಾದ ಪಾರಂಪರಿಕ ಶೌಚಾಲಯ
author img

By

Published : Mar 20, 2023, 8:02 PM IST

ಪಾರಂಪರಿಕ ತಜ್ಞ ಪ್ರೊಫೆಸರ್ ರಂಗರಾಜು ಅವರು ಶೌಚಾಲಯ ವಿಶೇಷತೆ ಬಗ್ಗೆ ವಿವರಿಸಿದ್ದಾರೆ

ಮೈಸೂರು : ಪ್ರವಾಸಿಗರ ನಗರಿ, ಅರಮನೆಗಳ ನಗರಿ ಹಾಗೂ ಪಾರಂಪರಿಕ ನಗರಿ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪಾರಂಪರಿಕ ನಗರಿಯಲ್ಲಿ ಈಗ ಪಾರಂಪರಿಕ ಶೈಲಿಯಲ್ಲಿ ಸಾರ್ವಜನಿಕ ಶೌಚಾಲಯವನ್ನ ನಿರ್ಮಾಣ ಮಾಡಲಾಗಿದೆ. ಈ ಪಾರಂಪರಿಕ ಶೌಚಾಲಯದಲ್ಲಿ ವಿಶೇಷಚೇತನರಿಗೆ ಉಚಿತ ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ಈ ಬಗ್ಗೆ ಪಾರಂಪರಿಕ ತಜ್ಞರ ಸಂದರ್ಶನ ಇಲ್ಲಿದೆ.

ಪ್ರವಾಸಿಗರ ನಗರಿಗೆ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಜೊತೆಗೆ ಸುತ್ತಮುತ್ತಲ ಜಿಲ್ಲೆಗಳಿಂದ ವ್ಯಾಪಾರ ವಹಿವಾಟಿಗಾಗಿ ಸಾವಿರಾರು ಜನ ಆಗಮಿಸುತ್ತಾರೆ. ಇಂತವರಿಗೆ ಮೈಸೂರು ನಗರದಲ್ಲಿ ಶೌಚಾಲಯದ ಸಮಸ್ಯೆ ದಿನನಿತ್ಯ ಕಾಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಮೈಸೂರು ಮಹಾನಗರ ಪಾಲಿಕೆ ಹಾಗೂ ನಮ್ಮ ಫೌಂಡೇಶನ್ ವತಿಯಿಂದ ಮೈಸೂರಿನ ಪುರಭವನ ಹಾಗೂ ಗಾಂಧಿ ವೃತ್ತದ ಮಧ್ಯ ಪಾರಂಪರಿಕ ರೀತಿಯ ಶೌಚಾಲಯವನ್ನ 1 ಕೋಟಿ 40 ಲಕ್ಷ ರೂಪಾಯಿಯಲ್ಲಿ ನಿರ್ಮಾಣ ಮಾಡಿದೆ. ಇಂದು ಶೌಚಾಲಯವನ್ನ ಉದ್ಘಾಟಿಸುವ ಮೂಲಕ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು.

ಇದನ್ನೂ ಓದಿ : ಮಾರ್ಚ್ 25 ರಂದು "ಕೆಆರ್ ಪುರ ದಿಂದ ವೈಟ್‌ಫೀಲ್ಡ್ "ನಮ್ಮ ಮೆಟ್ರೋ ಮಾರ್ಗ ಉದ್ಘಾಟನೆ

ಪಾರಂಪರಿಕ ಶೌಚಾಲಯದ ವೈಶಿಷ್ಟ್ಯತೆಗಳು : ಪಾರಂಪರಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ಶೌಚಾಲಯವು ಮೈಸೂರು ನಗರದ ಹೃದಯ ಭಾಗವಾದ ಅರಮನೆ, ದೊಡ್ಡಗಡಿಯಾರ, ಪುರಭವನ, ದೇವರಾಜ ಮಾರುಕಟ್ಟೆ ಹಾಗೂ ಗಾಂಧಿ ವೃತ್ತದ ಹತ್ತಿರದಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಮೈಸೂರು ಮಹಾನಗರ ಪಾಲಿಕೆ ಜಾಗ ನೀಡಿದ್ದು, ಪಾರಂಪರಿಕ ರೀತಿಯ ಶೌಚಾಲಯದಲ್ಲಿ ಪಾರಂಪರಿಕ ರೀತಿಯ ಕಂಬದ ಮಾದರಿ, ಕಮಾನು, ಮುಖ್ಯದ್ವಾರ ಸೇರಿದಂತೆ ಎಲ್ಲವೂ ಪಾರಂಪರಿಕ ಶೈಲಿಯಲ್ಲಿದೆ.

ಇದನ್ನೂ ಓದಿ : ಕಾಂಗ್ರೆಸ್​ನಿಂದ 4ನೇ ಗ್ಯಾರಂಟಿ ಘೋಷಣೆ: ನಿರುದ್ಯೋಗ ಯುವಕ, ಯುವತಿಯರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ

ಕಟ್ಟಡದ ಒಳಗಡೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗ, ತಾಯಿ ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಲಗೇಜ್​​ ಇಡಲು ಲಗೇಜ್​ ರೂಮ್, ರೆಸ್ಟ್ ರೂಮ್, ವಿಶೇಷಚೇತನರಿಗೆ ಉಚಿತ ಹಾಗೂ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ದೇಶದಲ್ಲಿ 20 ಪಾರಂಪರಿಕ ನಗರಗಳಲ್ಲಿ ಎಲ್ಲಿಯೂ ಈ ರೀತಿ ಪಾರಂಪರಿಕ ಶೈಲಿಯ ಶೌಚಾಲಯ ಇಲ್ಲ.

ಇದನ್ನೂ ಓದಿ : ಮಾರ್ಚ್ 25, 26ರಂದು ನಮ್ಮ ಬೆಂಗಳೂರು ಹಬ್ಬ: ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ

ಮೊದಲ ಬಾರಿಗೆ ಮೈಸೂರಿನಲ್ಲಿ ಈ ರೀತಿ ಶೌಚಾಲಯವನ್ನ ನಿರ್ಮಾಣ ಮಾಡಲಾಗಿದ್ದು, ಇದರ ಜೊತೆಗೆ ಮೈಸೂರು ನಗರದ ಇತರ ಭಾಗಗಳಲ್ಲೂ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಹಾಗೂ ಶೌಚಾಲಯ ಕೆಳಭಾಗಕ್ಕೆ ತ್ಯಾಜ್ಯ ವಸ್ತುಗಳಿಂದ ತಯಾರಿಸಿರುವ ಟೈಲ್ಸ್​ಗಳನ್ನೇ ಬಳಸಲಾಗಿದೆ ಎಂದು ಪಾರಂಪರಿಕ ತಜ್ಞ ಪ್ರೊಫೆಸರ್ ರಂಗರಾಜು ಈಟಿವಿ ಭಾರತ್​ಗೆ ವಿವರಿಸಿದರು.

ಇದನ್ನೂ ಓದಿ : ನೆರೆಹೊರೆಯವರ ಹೇಳಿಕೆಗಳನ್ನೇ ಸಾಕ್ಷ್ಯಗಳನ್ನಾಗಿ ಪರಿಗಣಿಸಿ ಶಿಕ್ಷೆ ನೀಡಲಾಗದು : ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.