ETV Bharat / state

ಅಮೆರಿಕದಲ್ಲಿ ಕಪ್ಪು ವರ್ಣೀಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಪ್ರತಿಭಟನೆ - ಪ್ರಗತಿಪರ ಒಕ್ಕೂಟ

ಅಮೆರಿಕದಲ್ಲಿ ಕಪ್ಪು ಜನಾಂಗದ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

Protest
Protest
author img

By

Published : Jun 5, 2020, 6:34 PM IST

ಮೈಸೂರು: ಅಮೆರಿಕದಲ್ಲಿ ಕಪ್ಪು ಜನಾಂಗದವರ ಮೇಲೆ ನಡೆದ ದೌರ್ಜನ್ಯ ಖಂಡಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಕಳೆದ ಒಂದು ವಾರದಿಂದ ಅಮೆರಿಕ ಹೊತ್ತಿ ಉರಿಯುತ್ತಿದೆ. ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಎಂಬುವವರನ್ನು ಮಿನಿಯಾ ಪೊಲೀಸ್ ನಗರದಲ್ಲಿ ಶ್ವೇತವರ್ಣೀಯ ಪೊಲೀಸ್ ಅಧಿಕಾರಿಯೊಬ್ಬ ನೆಲಕ್ಕೆ ಕೆಡವಿ ಆತನ ಕತ್ತಿನ ಮೇಲೆ ಮಂಡಿಯಿಟ್ಟು ಉಸಿರುಗಟ್ಟಿ ಸಾಯುವಂತೆ ಮಾಡಿದ್ದಾನೆ. ವರ್ಣ ಭೇದದ ದೌರ್ಜನ್ಯವಾಗಿದ್ದು, ಅಮೆರಿಕದಲ್ಲಿ ಎಲ್ಲ ಕಡೆ ಪ್ರತಿಭಟನೆ ಹಿಂಸಾರೂಪ ತಾಳಿದೆ. ಇದು ಅಮೆರಿಕ ಅಧ್ಯಕ್ಷ ಟ್ರಂಪ್ ವೈಫಲ್ಯಕ್ಕೆ ಸಾಕ್ಷಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಂಡ ಕಂಡವರ ಮೇಲೆ ಹರಿಹಾಯುತ್ತಿರುವ ಟ್ರಂಪ್, ಜನರ ಪ್ರತಿಭಟನೆಯ ಬಗ್ಗೆ ಸಹಾನುಭೂತಿ ತೋರಿಸುವ ಬದಲು ಪದೇ ಪದೆ ಟ್ವೀಟ್ ಮಾಡಿ ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ.

ಅಮೆರಿಕದಲ್ಲಿ ಅರಾಜಕತೆ, ಹಿಂಸಾಚಾರಕ್ಕೆ ಮಾಧ್ಯಮಗಳು ಕಾರಣ ಎಂದು ಹೇಳಿದ್ದಾರೆ. ಟ್ರಂಪ್ ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಪ್ರತಿಭಟನಾಕಾರರ ಮನವೊಲಿಸಿ , ವರ್ಣಭೇದ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.