ETV Bharat / state

ಸಿದ್ದರಾಮಯ್ಯ ಮುಂದಿನ ಚುನಾವಣೆಗಾಗಿ ಸಿದ್ದ'ರಹೀಮ್'ಯ್ಯ ಆಗುತ್ತಾರೆ : ಪ್ರತಾಪ್ ಸಿಂಹ - Karnataka hijab controversy

ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಿಜಾಬ್ ಅನ್ನ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಈ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬೇಡಿ. ಮುಂದಿನ ಚುನಾವಣೆ ಉದ್ದೇಶದಿಂದ ಸಿದ್ದರಾಮಯ್ಯ ತಮ್ಮ ಹೆಸರನ್ನ ಸಿದ್ದ'ರಹೀಮ್'ಯ್ಯ ಎಂದು ಬದಲಾಯಿಸಿಕೊಳ್ಳುತ್ತಾರೆ ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ

author img

By

Published : Feb 5, 2022, 2:34 PM IST

ಮೈಸೂರು : ಹಿಜಾಬ್ ಸಮರ್ಥನೆ ಮಾಡಿಕೊಳ್ಳುವ ಸಿದ್ದರಾಮಯ್ಯ ಮುಂದಿನ ಚುನಾವಣೆ ಉದ್ದೇಶದಿಂದ ತಮ್ಮ ಹೆಸರನ್ನ ಸಿದ್ದ'ರಹೀಮ್'ಯ್ಯ ಎಂದು ಬದಲಾಯಿಸಿಕೊಳ್ಳುತ್ತಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಿಜಾಬ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬೇಡಿ.

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವಂತೆ ಜಮೀರ್ ಅಹಮ್ಮದ್ ಕರೆಯುತ್ತಿದ್ದು, ಆಗ ಸಿದ್ದರಾಮಯ್ಯ ತಮ್ಮ ಹೆಸರನ್ನ ಸಿದ್ದ'ರಹೀಮ್'ಯ್ಯ ಎಂದು ಬದಲಾಯಿಸಿಕೊಳ್ಳುತ್ತಾರೆ ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ ಸಿಂಹ..

ಹಿಜಾಬ್ ಬಗ್ಗೆ ಒತ್ತಡ, ಆಕ್ರಮಣ, ಟೀಕೆಗಳ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಸರ್ಕಾರ ಬದ್ಧವಾಗಿರುವುದು ಒಳ್ಳೆಯ ಸಂದೇಶ. ಹಿಜಾಬ್​ಗಾಗಿ ಹಠ ಹಿಡಿದು ವಿದ್ಯಾರ್ಥಿಗಳು ಕುಳಿತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಮವಸ್ತ್ರ ಎನ್ನುವುದು ಬಣ್ಣದ ಉಡುಪಲ್ಲ, ಅದು ಮಕ್ಕಳಲ್ಲಿ ಸಮಾನತೆ ಸಾರುವ ವಸ್ತ್ರ ಸಂಹಿತೆ ಎಂದು ಸಂಸದರು ಹೇಳಿದರು.

ಓದಿ: ಶಾಲೆಗೆ ಹಿಜಾಬ್ ಹಾಕಿಯೇ ಹೋಗುವುದಾದ್ರೆ ಪಾಕಿಸ್ತಾನಕ್ಕೆ ಹೋಗಿ, ಈ ನೆಲದಲ್ಲಿ ಅವಕಾಶವಿಲ್ಲ: ಯತ್ನಾಳ್​ ಗುಡುಗು

ಕಾಲೇಜಿಗೆ ವಿದ್ಯಾರ್ಥಿಗಳು ಬರುವುದು ಬದುಕು ರೂಪಿಸಿಕೊಳ್ಳಲು. ಹಿಜಾಬ್ ಮತ್ತು ಟೋಪಿ ಹಾಕಿಕೊಂಡು ಕಲಿಯಬೇಕಾದರೆ ಮದರಸಾಕ್ಕೆ ಹೋಗಿ. ಸರ್ಕಾರಿ ಶಾಲೆಯಲ್ಲಿ ಇದು ಸಾಧ್ಯವಿಲ್ಲ. ಭರತಖಂಡ ಹಿಂದೂ ಧರ್ಮದ ಬುನಾದಿಯ ಮೇಲೆ ಇರುವ ದೇಶ. ಇಲ್ಲಿ ಗಣಪತಿ ಪೂಜೆ, ಶಾರದಾ ಪೂಜೆ ಹಾಗೂ ಹೆಣ್ಣು ಮಕ್ಕಳು ಕುಂಕುಮ ಹಾಕುವುದು ಇಲ್ಲಿಯ ಸಂಸ್ಕೃತಿ.

ಇದನ್ನ ಪ್ರಶ್ನೆ ಮಾಡುವಂತಿಲ್ಲ. ಕ್ರಿಶ್ಚಿಯನ್ನರು ಮತ್ತು ಇಸ್ಲಾಮರು ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಬಂದವರು. ಇಲ್ಲಿನ ಹಿಂದೂ ಸಂಸ್ಕೃತಿಯನ್ನ ಒಪ್ಪಿಕೊಳ್ಳಬೇಕು. ಕ್ರಿಶ್ಚಿಯನ್ನರು ಮತ್ತು ಇಸ್ಲಾಂನವರ ತಮ್ಮ ಧರ್ಮ ಹೇರಿಕೆ ನಡೆಯುವುದಿಲ್ಲ.‌ ಸ್ಥಳೀಯ ಸಂಸ್ಕೃತಿಯನ್ನ ಒಪ್ಪಿಕೊಳ್ಳಬೇಕು ಎಂದರು.

ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಿ : ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ತನ್ವೀರ್‌ಸೇಠ್ ಎಚ್ವರಿಕೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಶಾಸಕ ತನ್ವೀರ್‌ಸೇಠ್

ಕರಾವಳಿ ಭಾಗದಲ್ಲಿ ಹಿಜಾಬ್ ನಿಷೇಧ ವಿವಾದದ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ಅವರು, ಸಿಎಂ, ಶಿಕ್ಷಣ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ನಿರ್ಬಂಧ ವಿಧಿಸಿರುವ ಪ್ರಾಂಶುಪಾಲರ ನಡೆ ಆಕ್ಷೇಪಾರ್ಹ. ಇಸ್ಲಾಂನಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು, ಸಿಖ್ಖರು ಪೇಟ ಧರಿಸುವುದು,‌ ಕ್ರೈಸ್ತರಲ್ಲಿ ದೀಕ್ಷೆ ಪಡೆದು ಸ್ಕರ್ಟ್ ಧರಿಸುವುದು ಅನಾದಿ ಕಾಲದ ಸಂಪ್ರದಾಯ. ಇದಕ್ಕೆ ಈವರೆಗೂ ಯಾವುದೇ ತಡೆ, ನಿಷೇಧ ಹೇರಿಲ್ಲ ಎಂದಿದ್ದಾರೆ.

ನಾನು ಶಿಕ್ಷಣ ಸಚಿವನಾಗಿದ್ದಾಗ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಸ್ಕರ್ಟ್ & ಶರ್ಟ್ ಸಮವಸ್ತ್ರದ ಬದಲಿಗೆ ಚೂಡಿದಾರ್ ಸಮವಸ್ತ್ರವನ್ನ ಜಾರಿಗೊಳಿಸಿದ್ದೆ. ಪ್ರತಿ ಧರ್ಮದಲ್ಲೂ ವಯಸ್ಸಿಗನುಗುಣವಾಗಿ ವಸ್ತ್ರ ಧರಿಸುವುದು ಸರ್ವೇ ಸಾಮಾನ್ಯ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಸರ್ಕಾರದ ಕರ್ತವ್ಯ.

ಉಡುಪಿ ಕಾಲೇಜಿನ ಪ್ರಾಂಶುಪಾಲರ ನಡೆ ಮಕ್ಕಳಲ್ಲಿ ಜಾತಿ ತಾರತಮ್ಯ ಹುಟ್ಟು ಹಾಕುತ್ತಿದೆ. ಇದು ಆತಂಕಕಾರಿ, ಸಮಾಜಕ್ಕೆ‌ ಮಾರಕ. ಪರಿಸ್ಥಿತಿ ಕೈ ಮೀರುವ ಮುನ್ನ ಸರ್ಕಾರ ಆ ಪ್ರಾಂಶುಪಾಲರಿಗೆ ಸೂಕ್ತ ನಿರ್ದೇಶನ ನೀಡಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ.

ಓದಿ: ಮತ್ತಷ್ಟು ಹದಗೆಟ್ಟ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ: ಐಸಿಯುನಲ್ಲಿ ಚಿಕಿತ್ಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.