ETV Bharat / state

ಗೋಹತ್ಯೆ ನಿಷೇಧ ಕಾಯ್ದೆ ಎಫೆಕ್ಟ್ : ಅರೆಹೊಟ್ಟೆಯಲ್ಲೇ ದಿನದೂಡುತ್ತಿವೆ ಮೃಗಾಲಯ ಪ್ರಾಣಿಗಳು - ಗೋಹತ್ಯೆ ನಿಷೇಧ ಕಾಯ್ದೆ

ಮೃಗಾಲಯದಲ್ಲಿರುವ ಮಾಂಸಹಾರಿ ಪ್ರಾಣಿಗಳಿಗೆ ದನದ ಮಾಂಸವಾದ್ರೆ ಪ್ರತಿದಿನ 300ರಿಂದ 350 ಕೆಜಿ ಬೇಕಾಗಿತ್ತು. ಆದರೆ, ಈಗ 500 ಕೆಜಿಗೂ ಹೆಚ್ಚು ಕೋಳಿಮಾಂಸ ನೀಡಬೇಕಾಗಿದೆ..

Poultry meat instead of beef for zoo animals in Mysuru
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ
author img

By

Published : Jan 27, 2021, 4:08 PM IST

ಮೈಸೂರು : ಗೋಹತ್ಯೆ ನಿಷೇಧ ಕಾಯ್ದೆಯ ಪರಿಣಾಮ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಮಾಂಸಾಹಾರಿ ಪ್ರಾಣಿಗಳು ಅರೆಹೊಟ್ಟೆಯಲ್ಲಿ ದಿನಕಳೆಯುವಂತಾಗಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕ, ಮಾಂಸಹಾರಿ ಪ್ರಾಣಿಗಳ ಮೇಲೆ ಪ್ರಭಾವ ಬೀರಿದೆ.

ಮೈಸೂರು ಮೃಗಾಲಯದಲ್ಲಿ ಸಿಂಹ, ಚಿರತೆ, ಹುಲಿ, ಮೊಸಳೆ, ಕತ್ತೆಕಿರುಬ, ಆಫ್ರಿಕನ್ ಚೀತಾ ಸೇರಿ ಅನೇಕ ಮಾಂಸಾಹಾರಿ ಪ್ರಾಣಿಗಳಿವೆ. ಈ ಮೊದಲಿನಿಂದಲೂ ಇವುಗಳಿಗೆ ದನದ ಮಾಂಸ ನೀಡಲಾಗುತ್ತಿತ್ತು.

ಆದರೆ, ಗೋಹತ್ಯೆ ನಿಷೇಧದ ಬಳಿಕ ದನದ ಮಾಂಸದ ಬದಲು ಕೋಳಿ ಮಾಂಸ ನೀಡಲಾಗುತ್ತಿದೆ. ಆದರೆ, ಈ ಕೋಳಿ ಮಾಂಸವು ಮಾಂಸಾಹಾರಿ ಪ್ರಾಣಿಗಳಿಗೆ ಸಾಲುತ್ತಿಲ್ಲ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ

ಗೋಹತ್ಯೆ ನಿಷೇಧ ಮಾಡಿರುವುದರಿಂದ ಮೃಗಾಲಯದಲ್ಲಿರುವ ಮಾಂಸಹಾರಿ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತಿದೆ. ದನದ ಮಾಂಸವಾದ್ರೆ ಪ್ರತಿದಿನ 300ರಿಂದ 350 ಕೆಜಿ ಬೇಕಾಗಿತ್ತು. ಆದರೆ, ಈಗ 500 ಕೆಜಿಗೂ ಹೆಚ್ಚು ಕೋಳಿಮಾಂಸ ನೀಡಬೇಕಾಗಿದೆ.

ಇದಲ್ಲದೆ ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದಲೂ ಕೋಳಿಮಾಂಸ ಪ್ರಿಯವಲ್ಲ. ಮಾಂಸಾಹಾರಿ ಪ್ರಾಣಿಗಳಿಗೆ ದನದ ಮಾಂಸ ನಿಲ್ಲಿಸಿ, ಕೋಳಿ ಮಾಂಸ ನೀಡುತ್ತಿರುವುದರಿಂದ, ಆಹಾರ ಶೈಲಿಗೆ ನಿಧಾನವಾಗಿ ಹೊಂದಿಕೊಳ್ಳುತ್ತಿವೆಯೇ ಎಂಬುದರ ಕುರಿತು ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಮೃಗಾಲಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರಿಗೆ 3 ಕೆಜಿ ವರೆಗೆ ಶ್ರೀಗಂಧ ಖರೀದಿಗೆ ಅವಕಾಶ: ಡಿಸಿಎಫ್ ಪ್ರಶಾಂತ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.