ಮೈಸೂರು: ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಕ್ರಮ ಅನುಸರಿಸಿದರೂ ಕೂಡ ಕೆಲವೆಡೆ ಜನರು ಇದಕ್ಕೆ ಕ್ಯಾರೆ ಅನ್ನುತ್ತಿಲ್ಲ. ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದಾರೆ.

ನಗರಸಭಾ ಸದಸ್ಯ ಸೇರಿದಂತೆ ಇತರ 12ಜನರನ್ನು ಬಂಧಿಸಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ನಂಜನಗೂಡಿನ 2 ಮನೆಗಳಲ್ಲಿ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಳ್ಳದಕೇರಿಯ ಹಾಗೂ ಮುಸ್ಲಿಂ ಬಡಾವಣೆಯ 2 ಮನೆಯ ಮೇಲೆ ದಾಳಿ ಮಾಡಿಲಾಗಿದೆ.
ದಾಳಿಯ ಸಂದರ್ಭದಲ್ಲಿ ನಂಜನಗೂಡು ನಗರಸಭೆಯ ವಾರ್ಡ್ ನಂಬರ್ 1 ರ ಬಿಜೆಪಿ ಸದಸ್ಯ ಗಿರೀಶ್ ಸೇರಿದಂತೆ ಐವರನ್ನು ವಶಕ್ಕೆ ಪಡೆಯಲಾಗಿದೆ. ಇದಾದ ನಂತರ ಮತ್ತೊಂದು ಮನೆಗೆ ದಾಳಿ ಇಟ್ಟ ಪೊಲೀಸರು, 7 ಜನರನ್ನು ದಸ್ತಗಿರಿ ಮಾಡಿದ್ದು, ಈ ಸಂಬಂಧ ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಂಡಿದ್ದಾರೆ .