ಮೈಸೂರು: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಏಳು ಮಂದಿ ಅಂತಾರಾಜ್ಯ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಮುಸ್ತಾಫ(57), ಕುನ್ಹಿರಾಮನ್,(59), ಮಡಿಕೇರಿಯ ಅಬ್ದುಲ್ ಹಕೀಂ(44), ಗುರುಚರಣ್(34), ಕಾರ್ತಿಕ್(29), ಕಾಸರಗೋಡಿನ ಮಹಮ್ಮದ್ ಶಫಿ( 42), ಮೈಸೂರಿನ ಬನ್ನಿಮಂಟಪದ ಸಮೀವುಲ್ಲಾ(47) ಬಂಧಿತ ಆರೋಪಿಗಳು.
ಬಂಧಿತರಿಂದ ಎರಡು ಪ್ರಕರಣಗಳು ಭೇದಿಸಲಾಗಿದ್ದು, ಎನ್.ಆರ್.ಠಾಣೆ ವ್ಯಾಪ್ತಿಯಲ್ಲಿ 2.50 ಲಕ್ಷ ರೂ, ವಿವಿ ಪುರಂ ಠಾಣೆ ವ್ಯಾಪ್ತಿಯಲ್ಲಿ 12.50 ಲಕ್ಷ ರೂ ಸೇರಿದಂತೆ ಒಟ್ಟು 15 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 20 ಗ್ರಾಂ ತೂಕದ ಒಂದು ಗೋಲ್ಡ್ ಬಿಸ್ಕೆಟ್, ಎರಡು ಕಾರು ,ಒಂದು ಬೈಕ್, 5 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಓದಿ: ಮಗುವನ್ನೂ ಲೆಕ್ಕಿಸದೆ ಮನೆಗೆ ಬೆಂಕಿ ಹಚ್ಚಿದ ಕುಡುಕ...!
ಮುಸ್ತಫಾ (ಯೂಸುಫ್ ಹಾಜಿ) ಹಾಗೂ ಮಹಮ್ಮದ್ ಶಫಿ ವಿರುದ್ಧ ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶೋಕಿಗಾಗಿ ಹಣದ ಅವಶ್ಯಕತೆ ಇದ್ದುದರಿಂದ ಆರೋಪಿಗಳು ಜನರಿಗೆ ವಂಚನೆ ಮಾಡಲು ಮುಂದಾಗಿದ್ದರು ಎನ್ನಲಾಗುತ್ತಿದೆ.
ಗೋಲ್ಡ್ ಬಿಸ್ಕೇಟ್ ತೋರಿಸಿ ಯಾಮಾರಿಸುತ್ತಿದ್ದರು:
ಈ ಆರೋಪಿಗಳು ಜನರಿಗೆ ಚಿನ್ನದ ಗೋಲ್ಡ್ ಬಿಸ್ಕೆಟ್ ತೋರಿಸಿ ಯಾಮಾರಿಸುತ್ತಿದ್ದರು. ಬ್ಯಾಂಕ್ಗೆ ಹೋಗಿ ಹಿಂಬಾಗಿಲಿನಿಂದ ಪರಾರಿಯಾಗುತ್ತಿದ್ದರಂತೆ. ಈ ಪ್ರಕರಣ ಸಂಬಂಧ ಎನ್.ಆರ್.ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದರು.