ಮೈಸೂರು:ಜಿಲ್ಲಾಧಿಕಾರಿ ನಿವಾಸದ ಅನಧಿಕೃತ ನವೀಕರಣ ಆರೋಪದ ಹಿನ್ನೆಲೆ ತನಿಖೆ ನಡೆಸಿ ವರದಿ ನೀಡಲು ಕಂದಾಯ ಇಲಾಖೆ ನಿರ್ದೇಶನ ನೀಡಿದೆ. ಡಿಸಿ ಅಧಿಕೃತ ನಿವಾಸ ಜಲಸನ್ನಿಧಿ ಪಾರಂಪರಿಕ ಕಟ್ಟಡವನ್ನು ಅನಧಿಕೃತವಾಗಿ ನವೀಕರಿಸಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್ ಆರೋಪಿಸಿರುವ ಹಿನ್ನೆಲೆ, ಈ ದೂರು ಆಧರಿಸಿ ತನಿಖೆಗೆ ಆದೇಶಿಸಲಾಗಿದೆ.
ಪ್ರಾದೇಶಿಕ ಆಯುಕ್ತರಿಗೆ 7 ದಿನಗಳ ಒಳಗಾಗಿ ವರದಿ ನೀಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ನಿರ್ದೇಶನ ಬಂದಿದೆ. ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿಯಿಂದ ಅನುಮತಿ ಪಡೆಯದೆ ನೆಲಹಾಸು ನವೀಕರಣ ಮಾಡಲಾಗಿದೆ ಎಂಬ ಆರೋಪವಿದೆ.
ನೆಲಹಾಸು ನವೀಕರಣಕ್ಕೆ 16.50 ಲಕ್ಷ ಖರ್ಚು ಮಾಡಿರುವ ಆರೋಪ ಸಹ ಕೇಳಿ ಬಂದಿದೆ.
ಓದಿ:ರೈತ ಸ್ಪಂದನ ಕಾರ್ಯಕ್ರಮಕ್ಕೆ CM ಚಾಲನೆ: ಇಷ್ಟಪಟ್ಟು ರೈತ ಗೀತೆ ಹಾಡಿಸಿದ ಸಿಎಂ BSY