ಮೈಸೂರು: ಆಸ್ತಿ ವಿಚಾರಕ್ಕಾಗಿ ವೃದ್ಧನ ಕತ್ತು ಸೀಳಿ ಯುವಕರಿಬ್ಬರು ಕೊಲೆ ಮಾಡಿರುವ ಘಟನೆ ತಿ.ನರಸೀಪುರ ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಂಪೇಗೌಡ (65) ವರ್ಷದ ಚಾಮನಹಳ್ಳಿ ಗ್ರಾಮದ ನಿವಾಸಿ ಕೊಲೆಯಾಗಿರುವ ದುರ್ದೈವಿ. ಅದೇ ಗ್ರಾಮದ ಚೇತನ್ (28), ಮಧು (22) ಕೊಲೆಪಾತಕರು. ಪೊಲೀಸರು ಚೇತನ ಎಂಬಾತನನ್ನು ಹೆಡೆಮುರಿ ಕಟ್ಟಿದ್ದು, ಮತ್ತೊಬ್ಬ ಸ್ಥಳದಿಂದ ಪರಾರಿಯಾಗಿದ್ದಾನೆ.
![Chethan](https://etvbharatimages.akamaized.net/etvbharat/prod-images/4507243_v.jpg)
ತಡರಾತ್ರಿ ವೃದ್ಧನ ಮನೆಗೆ ನುಗ್ಗಿದ ಇವರಿಬ್ಬರು ವೃದ್ಧ ಮಲಗಿರುವ ವೇಳೆಯಲ್ಲಿ ಕೊಡಲಿಯಿಂದ ತಲೆ ಕಡಿದಿದ್ದಾರೆ. ಮನೆಯ ಮುಂಭಾಗದ ಜಾಗದ ವಿಚಾರವಾಗಿ ನಡೆದಿರುವ ಬರ್ಬರ ಕೊಲೆ ಇದು. ರಾತ್ರಿ ಮಲಗಿರುವ ವೃದ್ಧನ ಮೇಲೆ ಅಟ್ಟಹಾಸ ಮೆರೆದು, ಕೊಡಲಿಯಲ್ಲಿ ತಲೆ ಕತ್ತರಿಸಿ ರುಂಡ ಹಿಡಿದು ಪಾತಕಿಗಳು ಓಡಾಡಿದ್ದಾರೆ.
ನಿತ್ಯ ವೃದ್ಧ ಮಲಗುತ್ತಿರುವ ಸ್ಥಳವನ್ನು ನೋಡಿ ತಡರಾತ್ರಿ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ವೃದ್ಧನ ಬರ್ಬರ ಕೊಲೆಯಿಂದ ಬೆಚ್ಚಿಬಿದ್ದಿರುವ ಗ್ರಾಮದ ಮಹಿಳೆಯರು ಮಕ್ಕಳು ಮತ್ತು ಸಾರ್ವಜನಿಕರು, ರಾತ್ರಿ ಹೊರಗೆ ಮಲಗುವುದಕ್ಕೆ ಭಯವಾಗುತ್ತಿದೆ ಎನ್ನುತ್ತಿದ್ದಾರೆ.
ಕೃತ್ಯ ನೋಡಿ ಆಶ್ಚರ್ಯ ವ್ಯಕ್ತಪಡಿಸಿರುವ ಪೊಲೀಸರು:. ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಬರ್ಬರ ಹತ್ಯೆಗಳನ್ನು ನೋಡುತ್ತಿದ್ದ ಪೊಲೀಸರು, ಈ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವ ವೃದ್ಧನ ಕೊಲೆ ನೋಡಿ ಬೆಚ್ಚಿಬಿದ್ದಿದ್ದದಾರೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.