ETV Bharat / state

ವಿಧಾನಸಭಾ ಚುನಾವಣೆ: ನಾಳೆಯಿಂದ ನಾಮಪತ್ರ ಸಲ್ಲಿಕೆ ಶುರು - ಏಪ್ರಿಲ್ 20ರ ವರೆಗೆ ನಾಮಪತ್ರ ಸಲ್ಲಿಕೆ

ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲು ಈಗಾಗಲೇ 5 ಪ್ಯಾರಾ ಮಿಲಿಟರಿ ತುಕಡಿಗಳು ಮೈಸೂರು ನಗರಕ್ಕೆ ಆಗಮಿಸಿವೆ.

Mysore District Collector Dr. K. V. Rajendra spoke.
ಮೈಸೂರು ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ ಮಾತನಾಡಿದರು.
author img

By

Published : Apr 12, 2023, 6:45 PM IST

Updated : Apr 12, 2023, 7:34 PM IST

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ನಾಳೆ (ಗುರುವಾರ) ಅಧಿಸೂಚನೆ ಹೊರಡಿಸಲಾಗುವುದು. ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸರ್ಕಾರಿ ರಜಾ ದಿನಗಳು ಹೊರತುಪಡಿಸಿ, ಉಳಿದ ದಿನಗಳಲ್ಲಿ ಸಲ್ಲಿಕೆಗೆ ಅವಕಾಶವಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ಗಂಟೆಯ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಏಪ್ರಿಲ್ 20ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ತೆಗೆದುಕೊಳ್ಳಲು ಏಪ್ರಿಲ್ 24 ಕೊನೆಯ ದಿನ. ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ. ಮೇ 15 ರಂದು ಚುನಾವಣಾ ಪ್ರಕ್ರಿಯೆಗೆ ತೆರೆ ಬಿಳಲಿದೆ ಎಂದು ಮಾಹಿತಿ ನೀಡಿದರು.

2,905 ಮತಗಟ್ಟೆ ಸ್ಥಾಪನೆ: ಮೈಸೂರು ಜಿಲ್ಲೆಯಲ್ಲಿ 2905 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡ ರಚನೆ ಮಾಡಲಾಗಿದೆ. ಇದುವರೆಗೆ ಮೈಸೂರು ಜಿಲ್ಲಾದ್ಯಂತ 1,39,26,353 ನಗದು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ 3,63,40,561 ರೂಪಾಯಿ ಮೌಲ್ಯದ ಅಕ್ರಮ ಮದ್ಯ ಹಾಗೂ 6,14,250 ಮೌಲ್ಯದ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿ ವಿವರಿಸಿದರು.

ಮತದಾರರ ವಿವರ: ಜಿಲ್ಲೆಯಲ್ಲಿ ಹೊಸದಾಗಿ 15,936 ಹೊಸ ಮತದಾರರು ಸೇರ್ಪಡೆಯಾಗಿದ್ದು, ಈಗ ಒಟ್ಟು 26 ,38,487 ಒಟ್ಟು ಮತದಾರರಿದ್ದು, 13,08,771 ಪುರುಷ, 13,29,493 ಮಹಿಳಾ ಮತದಾರರಿದ್ದಾರೆ. ಇತರೆ 223 ಮತದಾರರಿದ್ದಾರೆ ಎಂದರು.

ಮೈಸೂರು ನಗರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಈಗಾಗಲೇ 5 ಪ್ಯಾರಾ ಮಿಲಿಟರಿ ಪಡೆಯ ತುಕಡಿಗಳು ಮೈಸೂರು ನಗರಕ್ಕೆ ಆಗಮಿಸಲಿವೆ. ಸದ್ಯದಲ್ಲೇ 8 ಪ್ಯಾರಾ ಮಿಲಿಟರಿ ಪಡೆ ಆಗಮಿಸಲಿವೆ. ಕಳೆದೊಂದು ವಾರದಿಂದ ಪ್ಯಾರಾ ಮಿಲಿಟರಿ ಪಡೆ ನಗರ ಹಾಗೂ ಜಿಲ್ಲಾ ವ್ಯಾಪ್ತಿಯ 164 ಹಳ್ಳಿಗಳಲ್ಲಿ ಪಥಸಂಚಲನ ನಡೆಸಿವೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಹಾಗೂ ಮೈಸೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದನ್ನೂಓದಿ: ಕೋಲಾರದಲ್ಲಿ 50 ಸಾವಿರ ಮತಗಳಿಂದ ಗೆಲ್ಲುವೆ; ಸಿದ್ದರಾಮಯ್ಯ ನಿಂತರೆ ಇನ್ನೂ 10 ಸಾವಿರ ಹೆಚ್ಚೇ- ವರ್ತೂರ್ ಪ್ರಕಾಶ್‌

Last Updated : Apr 12, 2023, 7:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.