ಮೈಸೂರು: ಬಿಎಡ್ ಪರೀಕ್ಷಾ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಮೈಸೂರು ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ.
2019-20ನೇ ಶೈಕ್ಷಣಿಕ ಸಾಲಿನ ಸ್ನಾತಕ, ಸ್ನಾತಕೋತ್ತರದ ಮಧ್ಯಂತರ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ ಪರೀಕ್ಷಾ ಶುಲ್ಕ ಶೇ.50 ರಿಯಾಯಿತಿ ನೀಡಲು ಆದೇಶ ನೀಡಿದೆ. ಈ ಬಾರಿ 2 ಮತ್ತು 4ನೇ ಸೆಮಿಸ್ಟರ್ ಬಿಎಡ್ ಪದವಿ ಪರೀಕ್ಷೆಗಳ ಪರೀಕ್ಷಾ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ಸಿಗಲಿದೆ ಎಂದು ವಿವಿ ತಿಳಿಸಿದೆ.
ಪೂರ್ಣ ಪರೀಕ್ಷೆಗೆ 1,300 ರೂ.ನಿಗದಿ ಮಾಡಲಾಗಿತ್ತು. ಆದರೀಗ ರಿಯಾಯಿತಿ ಬಳಿಕ 650 ರೂ. ನಿಗದಿ ಮಾಡಲಾಗಿದೆ. ಒಂದು ವಿಷಯಕ್ಕೆ (ಪ್ರಾಯೋಗಿಕ ಪರೀಕ್ಷೆಯೊಂದಿಗೆ) 770 ರೂ. ಇರುತ್ತದೆ. ರಿಯಾಯಿತಿ ಬಳಿಕ 385 ರೂ. ಆಗಿರಲಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದೇ ಇರುವ ಪರೀಕ್ಷೆಗೆ 440 ರೂ. ಶುಲ್ಕವಿತ್ತು. ಆದರೀಗ ರಿಯಾಯಿತಿ ಬಳಿಕ 220 ರೂ. ನಿಗದಿ ಮಾಡಲಾಗಿದೆ. ಅಂಕಪಟ್ಟಿ ಶುಲ್ಕ 320 ರೂ. ಇದ್ದು, ಇದಕ್ಕೆ ರಿಯಾಯಿತಿ ನೀಡಿಲ್ಲ.