ಮೈಸೂರು: ಕೊರೊನಾ ವೈರಸ್ ಹರಡದಂತೆ ಕಂಟೇನ್ಮೆಂಟ್ ಝೋನ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಜಿಲ್ಲೆಯ ಜನತೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.
ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಇದಕ್ಕೆ ಕಡಿವಾಣ ಹಾಕುವುದು ಪೊಲೀಸರು ಹಾಗೂ ವೈದ್ಯರ ತಂಡಕ್ಕೆ ಸವಾಲಾಗಿತ್ತು. ಈ ಸವಾಲನ್ನು ಎದುರಿಸಲು ವೈದ್ಯರೊಂದಿಗೆ ಪೊಲೀಸರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ. ಜನರು ತೋರಿಸುತ್ತಿರುವ ಕೃತಜ್ಞತೆಗೆ ನಾವು ಆಭಾರಿಯಾಗಿದ್ದೇವೆ ಎಂದರು.
ಇನ್ನು ಲಾಕ್ಡೌನ್ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ವಾಹನಗಳನ್ನು ವಾಪಸ್ ನೀಡಲಾಗಿದೆ. ದಾಖಲಾತಿ ಸರಿ ಇಲ್ಲದೆ ವಾಹನಗಳನ್ನು ಇಟ್ಟು ಕೊಳ್ಳಲಾಗಿದೆ. ದಾಖಲೆ ಒದಗಿಸಿದರೆ ಅದನ್ನು ಬಿಟ್ಟುಕೊಡ್ತೀವಿ ಎಂದು ತಿಳಿಸಿದರು.
ನಗರದ ಕಂಟೇನ್‌ಮೆಂಟ್ ಝೋನ್‌ಗಳು ತೆರವುಗೊಂಡ ಬಡಾವಣೆಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.