ಮೈಸೂರು: ನಂಜನಗೂಡು ತಾಲೂಕನ್ನು ಸೀಲ್ ಡೌನ್ ಮಾಡಿದ್ದರೂ, ಕೆರೆಯಲ್ಲಿ ಸಿಗುವ ಮೀನಿಗಾಗಿ ಸಾರ್ವಜನಿಕರು ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ.
ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ದೊಡ್ಡಕೆರೆಯಲ್ಲಿ ಹಿಡಿದ ಮೀನು ಖರೀದಿ ಮಾಡಲು ಮುಂದಾದ ಸಾರ್ವಜನಿಕರು, ಸೀಲ್ ಡೌನ್ ನಿಯಮವನ್ನು ಗಾಳಿಗೆ ತೂರಿದ್ದಾರೆ.
ಜುಬಿಲಂಟ್ ಕಾರ್ಖಾನೆಯಲ್ಲಿ ಮೊದಲ ವ್ಯಕ್ತಿಗೆ ಕೊರೊನ ಸೋಂಕು ಕಾಣಿಸಿಕೊಂಡು ನಂತರ ವ್ಯಾಪಿಸಿದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕು ಸೀಲ್ ಡೌನ್ ಆಗಿದೆ. ಆದರೆ,ಅಪಾಯದ ಪರಿಸ್ಥಿತಿ ಅರಿತೂ ಕೂಡ ಮೀನಿಗಾಗಿ ಮುಗಿ ಬೀಳುತ್ತಿರುವ ಜನ ಅಧಿಕಾರಿಗಳ ಶ್ರಮ ವ್ಯರ್ಥ ಮಾಡುತ್ತಿದ್ದಾರೆ.