ETV Bharat / state

ಮೇಯರ್ ಸ್ಥಾನಕ್ಕಾಗಿ ಮೂರು ಪಕ್ಷಗಳಲ್ಲಿ ಕಸರತ್ತು: ಯಾರಾಗಲಿದ್ದಾರೆ ಮೈಸೂರಿನ ಮೇಯರ್? - Mysore muncipality election compitation between 3 parties

ಕಾಂಗ್ರೆಸ್- ಜೆಡಿಎಸ್​ನ ನಡೆಯನ್ನು ಗಮನಿಸುತ್ತಿರುವ ಬಿಜೆಪಿ ಅಧಿಕಾರ ಹಿಡಿಯುವ ಅವಕಾಶಕ್ಕಾಗಿ ಕಾದು ಕುಳಿತಿದೆ. ಮೈತ್ರಿಯಾಗಲಿಲ್ಲವಾದರೆ ಸಂಖ್ಯಾಬಲದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿದೆ.

mysore-municipal-corporation-election
ಮೈಸೂರು ಮಹಾನಗರ ಪಾಲಿಕೆ
author img

By

Published : Aug 24, 2021, 6:38 PM IST

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬುಧವಾರ ನಡೆಯಲಿದೆ. ಹೀಗಾಗಿ, ಮೇಯರ್ ಪಟ್ಟಕ್ಕಾಗಿ ಮೂರು ಪಕ್ಷಗಳು ಕಸರತ್ತು ನಡೆಸುತ್ತಿವೆ. ಜೆಡಿಎಸ್​ನ ಮುಂದಿನ ನಡೆ ಗಮನಿಸಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ದಾಳ ಉರುಳಿಸಲು ಕಾದು ಕುಳಿತಿವೆ.

ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದುಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಮೂರು ಪಕ್ಷಗಳು ಮೇಯರ್ ಸ್ಥಾನಕ್ಕಾಗಿ ತಮ್ಮ ಪ್ರಯತ್ನ ಮುಂದುವರೆಸಿವೆ.

ಜೆಡಿಎಸ್ ನಿಲುವಿನ ಬಗ್ಗೆ ಕಾಂಗ್ರೆಸ್ ಗಮನ ಕೇಂದ್ರೀಕರಿಸಿದೆ. ಈ ಬಾರಿ ಮೇಯರ್ ಸ್ಥಾನ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಲ್ಲದೆ, ನಗರ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಆಗಿರುವ ಮೈತ್ರಿ ಒಪ್ಪಂದದಂತೆ ಜತೆಯಾಗಿ ಹೋಗೋಣವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಸಾ.ರಾ. ಮಹೇಶ್ ರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಹೇಳಿದ್ದಾರೆ. ಆದರೂ ಒಂದು ವೇಳೆ ಜೆಡಿಎಸ್ ಒಪ್ಪದಿದ್ದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದೆ.

ಏಕಾಂಗಿಯಾಗಿ ಸ್ಪರ್ಧಿಸಲು ಒತ್ತಡ: ಕಾಂಗ್ರೆಸ್- ಜೆಡಿಎಸ್​ನ ನಡೆಯನ್ನು ಗಮನಿಸುತ್ತಿರುವ ಬಿಜೆಪಿ ಅಧಿಕಾರ ಹಿಡಿಯುವ ಅವಕಾಶಕ್ಕಾಗಿ ಕಾದು ಕುಳಿತಿದೆ. ಮೈತ್ರಿಯಾಗಲಿಲ್ಲವಾದರೆ ಸಂಖ್ಯಾಬಲದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿದೆ. ಜೆಡಿಎಸ್ ಗೆ ಏಕಾಂಗಿಯಾಗಿ ಸ್ಪರ್ಧಿಸಲು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಅಲ್ಲದೇ ತಟಸ್ಥವಾಗಿ ಉಳಿಯುವಂತೆ ಮಾಡಲು ಜೆಡಿಎಸ್​ನ ಮನವೊಲಿಸಲಾಗುತ್ತದೆ ಎಂಬುದು ತಿಳಿದುಬಂದಿದೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮುಖಾಂತರ ಮಾತುಕತೆ ನಡೆಸಿದ್ದು, ಸದಸ್ಯರ ಸಭೆಯ ಬಳಿಕ ನಿಲುವು ತಿಳಿಸುವುದಾಗಿ ಹೇಳಿದ್ದಾರೆ.

72 ಮತದಾರರಿದ್ದಾರೆ: ಮೈಸೂರು ಪಾಲಿಕೆಯಲ್ಲಿ ಶಾಸಕ ಜಿ. ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಕೆ. ಟಿ ಶ್ರೀಕಂಠೇಗೌಡ ಹಾಗೂ 16 ಮಂದಿ ಪಾಲಿಕೆ ಸದಸ್ಯರು ಸೇರಿ ಜೆಡಿಎಸ್​ನಲ್ಲಿ 21 ಹಾಗೂ ಶಾಸಕ ತನ್ವೀರ್ ಸೇಠ್ ಹಾಗೂ 19 ಕಾರ್ಪೊರೇಟರ್ ಗಳು ಸೇರಿ ಕಾಂಗ್ರೆಸ್ ನಲ್ಲಿ 20 ಮತ್ತು ಬಿಜೆಪಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ ಹಾಗೂ 23 ಕಾರ್ಪೊರೇಟರ್ ಗಳು ಸೇರಿ 26 ಮತ ಬಲವಿದೆ. ಜೊತೆಗೆ ನಾಲ್ವರು ಪಕ್ಷೇತರರು ಓರ್ವ ಬಿಎಸ್​ಪಿ ಸದಸ್ಯೆ ಸೇರಿ ಒಟ್ಟು 72 ಮತದಾರರಿದ್ದಾರೆ.

ಒಂದು ವೇಳೆ ಹಳೆ ಮೈತ್ರಿ ಮುಂದುವರೆದರೆ ಕಾಂಗ್ರೆಸ್​ಗೆ ಅನುಕೂಲವಾಗಲಿದೆ. ಯಾರೊಂದಿಗೆ ಮೈತ್ರಿಯಾದರೂ ಮೇಯರ್ ಸ್ಥಾನ ಬಿಟ್ಟುಕೊಡಬಾರದೆಂದು ಜೆಡಿಎಸ್ ಸದಸ್ಯರ ಒತ್ತಾಯವಿದೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುರಿದು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಅನುಕೂಲವಾಗಲಿದೆ.

ಓದಿ: ಶಾಸಕರ ಭವನದಲ್ಲಿ ಯತ್ನಾಳ್ ವಿರುದ್ಧ ಅವಹೇಳನಕಾರಿ ಪೋಸ್ಟರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.