ETV Bharat / state

ಮೈಸೂರು ಪಾಲಿಕೆ ಮೇಯರ್ ಎಲೆಕ್ಷನ್.. ಮೈತ್ರಿ ಮುಂದುವರಿಯುತ್ತೆ, ಸಂಶಯ ಬೇಡ ಎಂದ ತನ್ವೀರ್ ಸೇಠ್ - ಶಾಸಕ ತನ್ವೀರ್ ಸೇಠ್

ಒಪ್ಪಂದದಂತೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇರಲಿದೆ. ಬಿಜೆಪಿ ಶಾಸಕ ಎಲ್. ನಾಗೇಂದ್ರ ನಮ್ಮನ್ನ ಕಂಡ್ರೆ ತನ್ವೀರ್ ಅವ್ರಿಗೆ ಅಸೂಯೆ ಅಂತಾ ಹೇಳಿದ್ದಾರೆ. ನಾವು ಬಿಜೆಪಿ ಬಗ್ಗೆ ಅಸೂಯೆ ಪಡೋದಿಲ್ಲ. ಆ ಪಕ್ಷವನ್ನ ನಾವು ದ್ವೇಷಿಸುತ್ತೇವೆ. ಅಂದ್ಮೇಲೆ ಅಸೂಯೆ ಎಲ್ಲಿಂದ ಬರ್ಬೇಕು. ಈಗಾಗಲೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿಯಲು ಪ್ರಯತ್ನ ನಡೆಯುತ್ತಿದೆ..

Tanveer Set
ಶಾಸಕ ತನ್ವೀರ್ ಸೇಠ್
author img

By

Published : Feb 23, 2021, 3:56 PM IST

Updated : Feb 23, 2021, 4:36 PM IST

ಮೈಸೂರು : ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯುತ್ತೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಜೆಡಿಎಸ್- ಕಾಂಗ್ರೆಸ್ ಒಪ್ಪಂದದಂತೆ ಮೈತ್ರಿ ಮುಂದುವರೆಯುತ್ತೆ ಎಂದು ಶಾಸಕ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತ್ನಾಡಿದ್ದೇವೆ. ಮೈಸೂರು ಪಾಲಿಕೆಯಲ್ಲಿ ಮೈತ್ರಿ ಮುಂದುವರೆಸಲು ಅಸ್ತು ಅಂದಿದ್ದಾರೆ. ಇಂದು ಹೆಚ್‌ ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ಕುಮಾರಸ್ವಾಮಿಯವರೊಂದಿಗೆ ಚರ್ಚೆ ಮಾಡುತ್ತೇವೆ ಎಂದರು.

ಮೈತ್ರಿ ಮುಂದುವರಿಯುತ್ತೆ, ಸಂಶಯ ಬೇಡ ಎಂದ ತನ್ವೀರ್ ಸೇಠ್

ಈಗಾಗಲೇ ಕುಮಾರಸ್ವಾಮಿಯವರೊಂದಿಗೆ ಮಾತ್ನಾಡಿದ್ದೀನಿ. ಮತ್ತೆ ಸಂಜೆ ಭೇಟಿ ಮಾಡುತ್ತೇವೆ. ನಮ್ಮ ಮೈತ್ರಿಯನ್ನ ಮುರಿಯುವ ಯತ್ನ ಮಾಡುತ್ತಿರೋದು ಬಿಜೆಪಿಯವ್ರು. ಅವ್ರು ಏನೇ ಮಾಡಿದ್ರೂ ಆಗೋದಿಲ್ಲ. ಶಾಸಕ ಸಾ ರಾ ಮಹೇಶ್, ನಾನು ಇಬ್ಬರು ನಮ್ಮ ನಾಯಕರ ತಿರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

ಓದಿ:ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ : ಆರ್. ಧೃವನಾರಾಯಣ

ಒಪ್ಪಂದದಂತೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇರಲಿದೆ. ಬಿಜೆಪಿ ಶಾಸಕ ಎಲ್. ನಾಗೇಂದ್ರ ನಮ್ಮನ್ನ ಕಂಡ್ರೆ ತನ್ವೀರ್ ಅವ್ರಿಗೆ ಅಸೂಯೆ ಅಂತಾ ಹೇಳಿದ್ದಾರೆ. ನಾವು ಬಿಜೆಪಿ ಬಗ್ಗೆ ಅಸೂಯೆ ಪಡೋದಿಲ್ಲ. ಆ ಪಕ್ಷವನ್ನ ನಾವು ದ್ವೇಷಿಸುತ್ತೇವೆ. ಅಂದ್ಮೇಲೆ ಅಸೂಯೆ ಎಲ್ಲಿಂದ ಬರ್ಬೇಕು. ಈಗಾಗಲೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿಯಲು ಪ್ರಯತ್ನ ನಡೆಯುತ್ತಿದೆ ಎಂದರು.

ಸಚಿವರು, ಬಿಜೆಪಿ ಮುಖಂಡರು ಸಾ ರಾ ಮಹೇಶ್ ಮನೆಗೆ ಹಲವು ಬಾರಿ ತೆರಳಿ‌ ಮಾತುಕತೆ ನಡೆಸಿದ್ದಾರೆ. ಆದ್ರೆ, ಸಾ ರಾ ಮಹೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಹೈಕಮಾಂಡ್ ಹೇಳಿದಂತೆ ನಡೆಯುತ್ತೇವೆ ಎಂದಿದ್ದಾರೆ. ಹೀಗಾಗಿ, ಕುಮಾರಸ್ವಾಮಿ ಅವರೊಂದಿಗೆ ಮಾತ್ನಾಡಿದ್ದೇವೆ. ಮೈತ್ರಿ ಮುಂದುವರೆಯುತ್ತೆ ಎಂದು ಹೇಳಿದರು.

Last Updated : Feb 23, 2021, 4:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.