ಮೈಸೂರು: ಜಂಬೂಸವಾರಿಗೆ 5 ದಿನಗಳ ಮಾತ್ರ ಬಾಕಿ ಇದ್ದು, ಇಂದು ಮೂರು ಆನೆಗಳಿಗಷ್ಟೇ ತಾಲೀಮಿನಲ್ಲಿ ಭಾಗಿಯಾಗಿವೆ. ಅಭಿಮನ್ಯು, ಚೈತ್ರ ಹಾಗೂ ಲಕ್ಷ್ಮೀ ಆನೆಗಳಿಗೆ ಭಾರ ಹೊರಿಸದೇ ತಾಲೀಮು ನೀಡಲಾಯಿತು.
ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಧನಂಜಯ ಹಾಗೂ ಅಶ್ವತ್ಥಾಮ ಭಾಗಿಯಾಗಿದೆ. ಇದೇ ಮೊದಲ ಬಾರಿಗೆ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಅಶ್ವತ್ಥಾಮ ಭಾಗಿಯಾಗಿದ್ದಾನೆ. ಗೋಪಾಲಸ್ವಾಮಿಯ ಆನೆ ಗೈರಾದ ಹಿನ್ನೆಲೆ ಇದೇ ಮೊದಲ ಬಾರಿಗೆ ಅಶ್ವತ್ಥಾಮನಿಗೆ ಪಟ್ಟದಾನೆಯಾಗುವ ಅವಕಾಶ ಒಲಿದಿದೆ.
ಶ್ರೀರಂಗಪಟ್ಟಣ ದಸರಾ ಹಿನ್ನೆಲೆ ಇಂದು ಗೋಪಾಲಸ್ವಾಮಿ ಹಾಗೂ ಕಾವೇರಿ ಆನೆ ಭಾಗಿಯಾಗಲಿದ್ದು, ಅರಮನೆಯಿಂದ ತೆರಳಿವೆ. ಪೊಲೀಸ್ ಭದ್ರತೆಯಲ್ಲಿ ಅರಣ್ಯ ಇಲಾಖೆಯ ಎರಡು ಲಾರಿಗಳಲ್ಲಿ ಗೋಪಾಲಸ್ವಾಮಿ ಹಾಗೂ ಕಾವೇರಿ ಆನೆಗಳನ್ನು ಕರೆದೊಯ್ಯಲಾಗಿದೆ. ಇಂದು ಸಂಜೆ ವೇಳೆಗೆ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮವನ್ನ ಮುಗಿಸಿ ಆನೆಗಳು ವಾಪಸಾಗಲಿವೆ.
ಇದನ್ನೂ ಓದಿ: ಮೈಸೂರು : ಫಿರಂಗಿ ತಾಲೀಮಿನಲ್ಲಿ ಬೆಚ್ಚಿದ ಗಜಪಡೆ