ಮೈಸೂರು: ಕೊರೊನಾದ ಹಾಟ್ಸ್ಪಾಟ್ ಆಗಿರುವ ಜಿಲ್ಲೆಯನ್ನು ಈಗ ರೆಡ್ ಝೋನ್ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆ ನಗರದ 12 ಏರಿಯಾ ಹಾಗೂ ನಂಜನಗೂಡಿನ ಕೆಲವು ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿವರ್ತಿಸಲಾಗಿದ್ದು, ಅಲ್ಲಿ ಯಾವ ರೀತಿ ನಿರ್ಬಂಧ ಇರುತ್ತದೆ ಎಂಬ ಬಗ್ಗೆ ಪಾಲಿಕೆಯ ವೈದ್ಯಾಧಿಕಾರಿ ಡಾ. ನಾಗರಾಜ್ ವಿವರಿಸಿದ್ದಾರೆ.
ಜಿಲ್ಲಾಧಿಕಾರಿ ನಿರ್ದೇಶನದಂತೆ ಈಗಾಗಲೇ ಕಂಟೈನ್ಮೆಂಟ್ ಝೋನ್ಗಳನ್ನು ಗುರುತಿಸಿಕೊಳ್ಳಲಾಗಿದೆ. ಅಲ್ಲಿ ಸಿಂಗಲ್ ಎಂಟ್ರಿ ಮತ್ತು ಸಿಂಗಲ್ ಎಕ್ಸಿಟ್ ಮಾಡಿ ಪಾಸಿಟಿವ್ ಮನೆಯಿದ್ದ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಿಕೊಳ್ಳಲಾಗಿದೆ. ಇಲ್ಲಿಗೆ ಬರುವಂತಹ ಎಲ್ಲಾ ಬೀದಿಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಯಾವುದೇ ವಾಹನವಾಗಲಿ ಹಣ್ಣು, ತರಕಾರಿ, ಹಾಲು ಕೊಡುವ ಪರಿಸ್ಥಿತಿ ಇದ್ದರೆ ಅವರು ಈ ಸಿಂಗಲ್ ಎಂಟ್ರಿ ಮೂಲಕ ಹೋಗಬೇಕು.
ಹೋಗುವಾಗ ಮತ್ತು ಹೋಗಿ ಬಂದ ಮೇಲೆ ಸ್ಯಾನಿಟೈಸರ್ ಉಪಯೋಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ಆರೋಗ್ಯ ಇಲಾಖೆಯಿಂದ ಸರ್ವೇ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಹೊಸ ಕೇಸ್ ಬಂದಿಲ್ಲ. ಒಂದು ವೇಳೆ ಕೇಸ್ ಪತ್ತೆಯಾದರೆ ಟೆಸ್ಟಿಂಗ್ ಮಾಡಿಸಲಾಗುತ್ತಿದೆ ಎಂದು ಕಂಟೈನ್ಮೆಂಟ್ ಝೋನ್ಗಳಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿದರು.