ಮೈಸೂರು: ನಿರ್ಮಾಣ ಹಂತದಲ್ಲಿದ್ದ ಮನೆ ಮುಂದಿನ ಸಂಪಿಗೆ ಬಿದ್ದು ಒಂದೂವರೆ ವರ್ಷದ ಪುಟ್ಟ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ತೆಂಕಲಕೊಪ್ಪಲಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತೆಂಕಲಕೊಪ್ಪಲಿನ ನಟರಾಜ್ರ ಪುತ್ರ ಒಂದೂವರೆ ವರ್ಷ ದಯಾನಂದ ಸಾವನ್ನಪ್ಪಿರುವ ದುರ್ದೈವಿ. ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ ವೇಳೆ ತಮ್ಮನನ್ನು ಅಲ್ಲೇ ಬಿಟ್ಟು ಅಕ್ಕ ಹೊರಗಡೆ ಹೋಗಿದ್ದಾಳೆ. ಈ ವೇಳೆ ಮಗು ಸಂಪಿಗೆ ಬಿದ್ದಿದ್ದಾನೆ.
ಪೋಷಕರು ಮಗುವನ್ನು ಹುಡುಕಿದಾಗ ಸಂಪಿನಲ್ಲಿ ಬಿದ್ದು ದಾರುಣವಾಗಿ ಸಾವನ್ನಪ್ಪಿದೆ.