ETV Bharat / state

ಚಿರತೆಗೆ ಶೂಟೌಟ್‌ ಆದೇಶ, ಮೃತ ಯುವತಿ ಕುಟುಂಬಕ್ಕೆ ₹7 ಲಕ್ಷ ಪರಿಹಾರ

author img

By

Published : Dec 2, 2022, 9:18 AM IST

Updated : Dec 2, 2022, 9:38 AM IST

ತಿ.ನರಸೀಪುರದಲ್ಲಿ ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಮೇಘನಾ ಕುಟುಂಬಕ್ಕೆ ಪರಿಹಾರದ ಜೊತೆಗೆ ಮನೆಯ ಒಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಮೇಲೆ ಕೆಲಸ ನೀಡುತ್ತೇವೆ ಎಂದು ಮೈಸೂರು ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ ತಿಳಿಸಿದರು.

mysore-cheetah-attack-issue-shoot-out-order-govt
ಮೈಸೂರು ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ

ಮೈಸೂರು: ಚಿರತೆ ದಾಳಿಯಿಂದ ಮೃತಪಟ್ಟ ಯುವತಿ ಮೇಘನಾ ಕುಟುಂಬಕ್ಕೆ 7 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಚಿರತೆಗೆ ಶೂಟೌಟ್ ಮಾಡಲು ಸರ್ಕಾರದಿಂದ ಆದೇಶವೂ ಸಿಕ್ಕಿದೆ ಎಂದು ಮೈಸೂರು ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ ಹೇಳಿದರು.

ಕಳೆದ ಮಧ್ಯರಾತ್ರಿ 12ರ ತನಕ ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಮಾಲತಿ ಪ್ರಿಯಾ, ಮೃತ ಯುವತಿಯ ಕುಟುಂಬಕ್ಕೆ ಏಳೂವರೆ ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಕುಟುಂಬದ ಓರ್ವರಿಗೆ ಹೊರಗುತ್ತಿಗೆ ಆಧಾರದಲ್ಲಿ ಮೇಲೆ ಕೆಲಸ ನೀಡುತ್ತೇವೆ ಎಂದರು.

ಚಿರತೆಗೆ ಶೂಟೌಟ್ ಆರ್ಡರ್- ಮೈಸೂರು ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ

ಚಿರತೆ ಹಾವಳಿ ನಿಯಂತ್ರಿಸಲು ತಿ.ನರಸೀಪುರ ತಾಲ್ಲೂಕಿನಲ್ಲಿ 15 ತಜ್ಞರ ತಂಡ ನೇಮಕ ಮಾಡುತ್ತೇವೆ. ಚಿರತೆ ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಸಿಕ್ಕಿದ್ದು, ಹಾವಳಿ ತಪ್ಪಿಸಲು ಕ್ರಮ ವಹಿಸುತ್ತೇವೆ‌ ಎಂದು ಭರವಸೆ ಕೊಟ್ಟರು.

ಇದನ್ನೂ ಓದಿ: ತಿ.ನರಸೀಪುರದಲ್ಲಿ ಚಿರತೆ ದಾಳಿಗೆ ಮತ್ತೊಂದು ಬಲಿ

Last Updated : Dec 2, 2022, 9:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.