ಮೈಸೂರು : ಬಾಕಿ ಇರುವ 1.65 ಕೋಟಿ ರೂಪಾಯಿ ಕಂದಾಯ ಪಾವತಿಸುವಂತೆ ಪೊಲೀಸ್ ಭವನಕ್ಕೆ ಪಾಲಿಕೆ ನೋಟಿಸ್ ಜಾರಿ ಮಾಡಿದೆ.
2002 ರಿಂದಲೂ ಕರ್ನಾಟಕ ಪೊಲೀಸ್ ಭವನದ ಆಡಳಿತ ಮಂಡಳಿ ಪಾಲಿಕೆಗೆ ಸರಿಯಾಗಿ ಕಂದಾಯ ಪಾವತಿಸಿಲ್ಲ. ವರ್ಷಕ್ಕೆ 23 ಸಾವಿರ ಮಾತ್ರ ಹಳೆಯ ದರದಲ್ಲಿ ಕಂದಾಯ ಪಾವತಿಸಲಾಗುತಿತ್ತು. ಹೀಗಾಗಿ ಮೈಸೂರು ಮಹಾನಗರ ಪಾಲಿಕೆ ಬಾಕಿ ಇರುವ 1.65 ಕೋಟಿ ರೂಪಾಯಿ ಕಂದಾಯವನ್ನು ಪಾವತಿ ಮಾಡುವಂತೆ ಪೊಲೀಸ್ ಭವನಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಹಳೆಯ ದರದಲ್ಲಿ ಮಾತ್ರ ಕಂದಾಯವನ್ನು ಪಾವತಿಸುತ್ತಿದ್ದೆವು. ಆದರೆ, ಬದಲಾದ ತೆರಿಗೆ ವಿವರ ತಿಳಿಯದ ಕಾರಣ ಗೊಂದಲ ಉಂಟಾಗಿದ್ದು, ಶೀಘ್ರವೇ ಬಾಕಿ ಉಳಿದಿರುವ ಕಂದಾಯವನ್ನು ಪಾವತಿಸಲಾಗುವುದು ಎಂದು ತಿಳಿಸಿದ್ಧಾರೆ.