ETV Bharat / state

ಚುನಾವಣೆಗೂ ಹೆಸರು ಬದಲಾವಣೆಗೂ ಸಂಬಂಧವಿಲ್ಲ: ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ - ರಾಜ್ಯ ಪೊಲೀಸ್

ಚುನಾವಣೆಗೂ ಹೆಸರು ಬದಲಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
author img

By ETV Bharat Karnataka Team

Published : Nov 28, 2023, 6:03 PM IST

ಸಂಸದ ಪ್ರತಾಪ್ ಸಿಂಹ

ಮೈಸೂರು : ಇಂಗ್ಲಿಷ್​ ಮತ್ತು ಹಿಂದಿಯಲ್ಲಿ ಹೆಸರು ಬರೆಯುವಾಗ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಇಂಗ್ಲಿಷ್​ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ ಅಷ್ಟೇ. ಹೆಸರು ಬದಲಾವಣೆಗೂ ಸಂಖ್ಯಾಶಾಸ್ತ್ರಕ್ಕೂ, ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಮ್ಮ ಇಂಗ್ಲಿಷ್ ಹೆಸರು ಬದಲಾವಣೆಯ ಬಗ್ಗೆ ಮಾಹಿತಿ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಅಕ್ಷರ ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅದು ಸಂಖ್ಯಾಶಾಸ್ತ್ರ ಎಂದು ಏನೂ ಇಲ್ಲ. ನೀವು ಸಂಖ್ಯಾಶಾಸ್ತ್ರ ಎಂದರೆ ಅದು ಸಂಖ್ಯಾಶಾಸ್ತ್ರ ಅಷ್ಟೇ. ನನ್ನ ಹೆಸರನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯುವಾಗ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಯಥಾವತ್ತಾಗಿ ಇಂಗ್ಲಿಷ್ ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಈ ಬದಲಾವಣೆಗೂ, ಸಂಖ್ಯಾಶಾಸ್ತ್ರಕ್ಕೂ, ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸದರು ಸ್ಪಷ್ಟನೆ ನೀಡಿದರು.

ಹಳೆಯ ಹೆಸರಿನಿಂದಲೇ ಎರಡು ಬಾರಿ ಗೆದ್ದು ಸಂಸದನಾಗಿದ್ಧೇನೆ. ಮೈಸೂರೇ ಗೊತ್ತಿಲ್ಲದ ಸಂದರ್ಭದಲ್ಲಿ ಜನರು ಗೆಲ್ಲಿಸಿದರು. ಎರಡನೇ ಬಾರಿಯೂ ನನ್ನನ್ನು ಜನ ಗೆಲ್ಲಿಸಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಯಾರೇ ಅಭ್ಯರ್ಥಿ ನಿಂತರೂ ಎರಡು ಲಕ್ಷ ಮತಗಳಿಂದ ಗೆಲುವು ಸಾಧಿಸುತ್ತೇನೆ. ನಾನು ಒಂಥರ ಎಲ್ಲ ಪಕ್ಷದ ಮತದಾರರ ಅಭ್ಯರ್ಥಿ ಇದ್ದಂತೆ. ಎಲ್ಲ ಪಕ್ಷದಲ್ಲೂ ಮೋದಿ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ನನಗೆ ಮತ ಹಾಕುತ್ತಾರೆ. ಈಗ ಜೆಡಿಎಸ್​ನವರು ಕೂಡ ಮೈತ್ರಿ ಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಬಲ ಬಂದಿದೆ. ಈ ಬಾರಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇನೆ ಎಂದರು.

ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು : ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಭ್ರೂಣ ಹತ್ಯೆ ಪ್ರಕರಣ ಮೂರು ಜಿಲ್ಲೆಗೆ ವಿಸ್ತರಿಸಿದೆ. ಹಾಗಾಗಿ ಮೈಸೂರು ನಗರ ಪೊಲೀಸರು ಇದರ ತನಿಖೆ ನಡೆಸುವುದಿಲ್ಲ. ರಾಜ್ಯ ಪೊಲೀಸ್ ಇದನ್ನು ತನಿಖೆ ಮಾಡುತ್ತಿದೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಪೊಲೀಸರು ತನಿಖೆ ಕೈಗೊಂಡು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಸಂಸದರು ಹೇಳಿಕೆ ನೀಡಿದರು.

ಇಂಗ್ಲಿಷ್ ಹೆಸರಲ್ಲಿ ಕೊಂಚ ಬದಲಾವಣೆ : ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಇಂಗ್ಲಿಷ್‌ ಹೆಸರಿನಲ್ಲಿ ಸ್ವಲ್ಪ ಬದಲಾವಣೆ (ನವೆಂಬರ್ 27-2023) ಮಾಡಿಕೊಂಡಿದ್ದರು. ಸಂಖ್ಯಾಶಾಸ್ತ್ರದ ಪ್ರಕಾರ, ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿರುವುದಾಗಿ ಸಂಸದರು ಅಫಿಡವಿಟ್ ಮೂಲಕ ಘೋಷಣೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

ಇದನ್ನೂ ಓದಿ : ಇನ್ಮುಂದೆ Prathap Simha ಅಲ್ಲ: ಇಂಗ್ಲಿಷ್ ಹೆಸರಲ್ಲಿ ಕೊಂಚ ಬದಲಾವಣೆ ಮಾಡಿಕೊಂಡ Pratap Simmha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.