ETV Bharat / state

ವಕ್ಫ್ ಮಂಡಳಿ ರೀತಿ ದೇವಸ್ಥಾನದ ರಕ್ಷಣೆಗೂ ವ್ಯವಸ್ಥೆ ಮಾಡಿ: ಸಂಸದ ಪ್ರತಾಪ್ ಸಿಂಹ - MP Pratap Simha press meet in Mysore

ದೇವಸ್ಥಾನದ ರಕ್ಷಣೆಗೂ ಕೂಡ ಮುಂದಿನ ದಿನಗಳಲ್ಲಿ ವಕ್ಫ್ ಮಂಡಳಿ ರೀತಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ನಮ್ಮ ಬೇಡಿಕೆಯಾಗಿದೆ. ಆಗ ನಮ್ಮ ದೇವಸ್ಥಾನಗಳನ್ನು ಯಾರೋ ಬಂದು ಇದು ಅಕ್ರಮ, ಅನಧಿಕೃತ ಎಂದು ಹೇಳಲು ಸಾಧ್ಯವಿಲ್ಲ. ಅಂತೆಯೇ ಮುಖ್ಯಮಂತ್ರಿಗಳು ಈ ಎಲ್ಲಾ ವಿಚಾರಗಳ ಬಗ್ಗೆ ಸಕಾರಾತ್ಮಕ ಮನಸ್ಥಿತಿ ಹೊಂದಿದ್ದಾರೆ ಎಂದು ಸಂಸದ ಪ್ರತಾಪ್ ಹೇಳಿದರು.

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
author img

By

Published : Sep 13, 2021, 3:30 PM IST

ಮೈಸೂರು: ಮೈಸೂರು ಜಿಲ್ಲೆಯಲ್ಲಿ ದೇವಾಲಯಗಳನ್ನು ತೆರವುಗೊಳಿಸುವುದನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಈ ವಿಚಾರಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸದ್ಯಕ್ಕೆ ಆತಂಕ ದೂರವಾಗಿದೆ. ಸಂವಿಧಾನದಲ್ಲಿ ನಮಗೆ ಪೂಜಿಸುವುದಕ್ಕೆ ಸಮಾನ ಹಕ್ಕುಗಳಿವೆ ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ‌.

ವಕ್ಫ್ ಮಂಡಳಿ ರೀತಿ, ದೇವಸ್ಥಾನಗಳ ರಕ್ಷಣೆಗೆ ವ್ಯವಸ್ಥೆ ಮಾಡಿ:

ದೇವಸ್ಥಾನದ ರಕ್ಷಣೆಗೂ ಕೂಡ ಮುಂದಿನ ದಿನಗಳಲ್ಲಿ ವಕ್ಫ್ ಮಂಡಳಿ ರೀತಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ನಮ್ಮ ಬೇಡಿಕೆಯಾಗಿದೆ. ಆಗ ನಮ್ಮ ದೇವಸ್ಥಾನಗಳನ್ನು ಯಾರೋ ಬಂದು ಇದು ಅಕ್ರಮ, ಅನಧಿಕೃತ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇವಸ್ಥಾನಗಳ ಕೋಡಿಫಿಕೇಷನ್ ಹಾಗೂ ಕಾನೂನು ಸುವ್ಯವಸ್ಥೆ ತಂದು ಕೊಡುವ ವ್ಯವಸ್ಥೆ ಮಾಡಿಕೊಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ಸಂಸದ ಪ್ರತಾಪ್ ಸಿಂಹ

ಅಂತೆಯೇ ಮುಖ್ಯಮಂತ್ರಿಗಳು ಈ ಎಲ್ಲಾ ವಿಚಾರಗಳ ಬಗ್ಗೆ ಸಕಾರಾತ್ಮಕ ಮನಸ್ಥಿತಿ ಹೊಂದಿದ್ದಾರೆ. ಅವರಿಗೆ ಎಲ್ಲಾ ವಿಚಾರವು ಗಮನದಲ್ಲಿದೆ. ಅವರು ಖಚಿತವಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ನಮ್ಮ ಆತಂಕಗಳು ಸದ್ಯಕ್ಕೆ ದೂರವಾಗಿವೆ. ಆದೇಶ ಆದಷ್ಟು ಬೇಗ ಹೊರಬರಲಿ ಎಂದು ಆಶಿಸುತ್ತಾ ಆಶ್ವಾಸನೆ ನೀಡಿದ್ದಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

2009ರ ಆಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಮಸೀದಿ, ಚರ್ಚ್, ದೇವಸ್ಥಾನ ಇರಬಾರದು. ಇದನ್ನು ಪಾಲಿಸಿದ್ದಾರೆಯೇ ಇದು ಕೂಡ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗಲಿಲ್ಲವೇ ಎಂದು ಪ್ರಶ್ನಿಸಿದರು.

'ಸೂಕ್ತ ಕ್ರಮ ಕೈಗೊಳ್ಳಿ ಎಂದಿದ್ದಾರೆ,ಕೆಡವಿ ಎಂದು ಹೇಳಿಲ್ಲ':

2009ರೊಳಗಿನ ಪೂಜಾ ಸ್ಥಳಗಳ ಬಗ್ಗೆ ಸಮೀಕ್ಷೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆಯೇ ಹೊರತು ಎಲ್ಲೂ ಕೂಡ ಕೆಡವಿ ಎಂದು ಹೇಳಿಲ್ಲ. 1964 ರಲ್ಲಿ ಕರ್ನಾಟಕ ಮುನಿಸಿಪಾಲಿಟಿ ಆ್ಯಕ್ಟ್ ಬಂದಿದೆ. 1993 ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆ್ಯಕ್ಟ್ ಬಂದಿದೆ. ಮುನಿಸಿಪಾಲಿಟಿ ಆ್ಯಕ್ಟ್ ಬರುವ ಮುನ್ನ ದೇವಸ್ಥಾನಗಳಿಗೆ ಲೈಸನ್ಸ್ ತೆಗೆದುಕೊಂಡು ಕಟ್ಟುವ ಹಾಗಿರಲಿಲ್ಲ. ಪಂಚಾಯತ್‌ನಲ್ಲಿ ಲೈಸನ್ಸ್ ಪಡೆಯುವ ಪದ್ಧತಿ ಇರಲಿಲ್ಲ ಎಂದರು.

ಮೈಸೂರನ್ನು ಯದುವಂಶದ ರಾಜ ಆಳುತ್ತಿದ್ದುದು. ಹೈದರಾಬಾದ್ ಹೊರತುಪಡಿಸಿ, ಉಳಿದೆಲ್ಲಾ ಕಡೆ ಹಿಂದೂ ರಾಜಮಹಾರಾಜರೇ ಇದ್ದದ್ದು. ಈ ದೇವಸ್ಥಾನಗಳ ಆಶ್ರಯದಾತರು, ಪೋಷಕರು ಮಹಾರಾಜರೇ ಆಗಿದ್ದರು. ಆ ಕಾಲದಲ್ಲಿ ಎಷ್ಟೋ ದೇವಸ್ಥಾನಗಳು ನಿರ್ಮಾಣವಾಗಿದೆ. ಇಂದು ನೀವು ಅನಧಿಕೃತವೆಂದು ಹೇಳಿ, ಹೊಸ ಕಾಯಿದೆ ತಂದು 40-50 ವರ್ಷದಿಂದೀಚಿಗೆ ಬಂದ ಕಾಯಿದೆ ಹಿಡಿದುಕೊಂಡು ಅನಧಿಕೃತ ಎಂದು ಯಾವ ರೀತಿ ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಈ ರೀತಿ ಯೋಚನೆ ಮಾಡುವುದೇ ತಪ್ಪು. 1993 ರಲ್ಲಿ ಪಂಚಾಯತ್ ರಾಜ್ ಆ್ಯಕ್ಟ್ ಬಂತು. ಪಂಚಾಯತಿ ಒಪ್ಪಿಗೆ ಪಡೆಯಲಿಲ್ಲ ಎಂದು ಹುಚ್ಚಗಣಿ ಗ್ರಾಮಕ್ಕೆ ಹೋಗಿ ಮಹದೇವಮ್ಮ, ಕಾಲಬೈರವೇಶ್ವರ ದೇವಸ್ಥಾನ ತೆರವುಗೊಳಿಸುವುದು ಎಷ್ಟರಮಟ್ಟಿಗೆ ಸರಿ ಎಂದರು.

ದಾರಿ ತಪ್ಪಿಸುತ್ತಿರುವ ಅಧಿಕಾರಿಗಳು:

ಸುಪ್ರೀಂ ಕೋರ್ಟ್ ಆದೇಶದ ನಂತರವು ಅನಧಿಕೃತವಾಗಿ ಎಷ್ಟು ಚರ್ಚ್, ಮಸೀದಿ, ದೇವಸ್ಥಾನ ಕಟ್ಟಿದ್ದಾರೆ. ಇದು ಆದೇಶದ ಉಲ್ಲಂಘನೆ ಆಗಲಿಲ್ವಾ ಅಧಿಕಾರಿಗಳು ಏನು ಮಾಡುತ್ತಿದ್ದರು. ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ದಾರಿತಪ್ಪಿಸುತ್ತಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳದೇ ದೇವಸ್ಥಾನ ಕೆಡುವಿರುವುದನ್ನು ತಪ್ಪು ಎಂದು ಹೇಳುವುದು ಅಟ್ಯಾಕ್ ಆಗುವುದಿಲ್ಲ. ಇನ್ನಾದರೂ ಸರಿಪಡಿಸಿಕೊಳ್ಳಿ ಎಂದು ಹೇಳುತ್ತಿದ್ದೇವೆ ಎಂದು ಹೇಳಿದರು.

ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಎಂದು ಹೇಳಿತು. ಆದರೆ ಅಧಿಕಾರಿಗಳು ದೇವಸ್ಥಾನಗಳಿಗೆ ನೋಟಿಸ್ ನೀಡಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ, ಅದನ್ನು ಉಳಿಸಿಕೊಳ್ಳಲು ಸಾಧ್ಯತೆ ಇದೆಯೋ? ಅದನ್ನು ಸ್ಥಳಾಂತರ ಮಾಡಬಹುದಾ? ಅಥವಾ ಅದಕ್ಕೆ ಬದಲಿ ವ್ಯವಸ್ಥೆ ಮಾಡಬಹುದಾ ಎಂಬುದನ್ನು ಪರಿಶೀಲಿಸದೆ ಏಕಾಏಕಿ ಪಟ್ಟಿ ಮಾಡಿ ಸುಪ್ರೀಂಕೋರ್ಟ್ ವರದಿ ಸಲ್ಲಿಸಿದರು. ಕೊಟ್ಟಿರುವುದು ತಪ್ಪಾದ ವರದಿ ಎಂದರು.

ತೆರವು ಕಾರ್ಯ ನಿಲ್ಲಿಸುವಂತೆ ಸ್ಪಷ್ಟ ಆದೇಶ ಬರಲಿದೆ:

ಅಧಿಕಾರಿಗಳು ನೀಡಿರುವ ಪಟ್ಟಿಯಲ್ಲಿ ಎಲ್ಲೆಲ್ಲಿ ಉಳಿಸಿಕೊಳ್ಳಬಹುದು, ಎಲ್ಲೆಲ್ಲಿ ಸಕ್ರಮ ಮಾಡಿಕೊಳ್ಳಬಹುದು, ಇದೆಲ್ಲದರ ಬಗ್ಗೆ ಆದೇಶ ಮಾಡುತ್ತೇವೆ ಎಂದು ಸ್ಪಷ್ಟವಾಗಿ ಮುಖ್ಯಂತ್ರಿಗಳು ಹೇಳಿದ್ದಾರೆ. ಇನ್ಮುಂದೆ ತೆರವು ಕಾರ್ಯವನ್ನು ನಿಲ್ಲಿಸಬೇಕು ಎಂದು ಸರ್ಕಾರದ ಆದೇಶ ಬರಲಿದೆ. ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅಧಿವೇಶನ ಆರಂಭವಾಗಿದ್ದು, ಅಲ್ಲಿ ಪ್ರಶ್ನೆಗಳು ಬಂದರೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಂಜನಗೂಡಿನ ತಹಶೀಲ್ದಾರ್ ವಿರುದ್ದ ಕ್ರಮ ಕೈಗೊಳ್ಳಿ:

ನ್ಯಾಯಾಲಯದ ಆದೇಶದಲ್ಲಿ ಎಲ್ಲೂ ಏಕಾಏಕಿ ದೇವಸ್ಥಾನ ತೆರವಿಗೆ ಸೂಚಿಸಿಲ್ಲ. ನಂಜನಗೂಡಿನ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಿ, ಜಿಲ್ಲಾಡಳಿತಕ್ಕೂ ಸೂಚನೆ ನೀಡಿ ಎಂದು ಸಿಎಂ ಬಳಿ ಕೇಳಿರುವೆ ಎಂದು ಹೇಳಿದರು.

ನಂಜನಗೂಡು ತಾಲ್ಲೂಕಿನ ಉಚ್ಚಗನಿ ಗ್ರಾಮದ ಮಹದೇವಮ್ಮ ದೇವಸ್ಥಾನ, ರಸ್ತೆಗೆ ಅಡ್ಡಿಯಾಗುತ್ತಿರಲಿಲ್ಲ. ಅದು ಐತಿಹಾಸಿಕ ದೇಗುಲ, ಅದನ್ನು ತೆರವು ಮಾಡಿದ್ದಾರೆ. ಮೂಲ ವಿಗ್ರಹ ಸ್ಥಳಾಂತರಿಸದೆ ನೆಲಸಮ ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ ಎಂದರು.

ಇದನ್ನೂ ಓದಿ: ಲಿಂಗಸುಗೂರಿನಲ್ಲಿ ಗ್ರಾಮೀಣ ಕರ್ನಾಟಕದ ಮೊದಲ ಪ್ರನಾಳ ಶಿಶು ಜನನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.