ETV Bharat / state

ಸಾಂಸ್ಕೃತಿಕ ನಗರಿಗೆ ನಾಳೆ ಮೋದಿ ಆಗಮನ... ಪೊಲೀಸರಿಂದ ವ್ಯಾಪಕ ಭದ್ರತೆ

ನಾಳೆ ನರೇಂದ್ರ ಮೋದಿ ಮೈಸೂರು ವಿಭಾಗೀಯ ಮಟ್ಟದ ನಾಲ್ಕು ಲೋಕಸಭಾ ವ್ಯಾಪ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾರಾಜ ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ವ್ಯಾಪಕ ಭದ್ರತೆ
author img

By

Published : Apr 8, 2019, 11:24 PM IST

ಮೈಸೂರು: ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ನರೇಂದ್ರ ಮೋದಿ ಚುನಾವಣಾ ರ್ಯಾಲಿಗೆ ವ್ಯಾಪಕ ಭದ್ರತೆ ನೀಡಲಾಗಿದ್ದು,ವಿಶೇಷ ಭದ್ರತಾ ಪಡೆಗಳು ನಗರಕ್ಕೆ ಆಗಮಿಸಿವೆ.

ನಾಳೆ ನರೇಂದ್ರ ಮೋದಿ ಮೈಸೂರು ವಿಭಾಗೀಯ ಮಟ್ಟದ ನಾಲ್ಕು ಲೋಕಸಭಾ ವ್ಯಾಪ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾರಾಜ ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ನಾಳೆ 4 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ ಅಲ್ಲಿಂದ ನೇರವಾಗಿ ಮಹಾರಾಜ ಕಾಲೇಜು ಮೈದಾನ ರ್ಯಾಲಿ ನಡೆಯುವ ಜಾಗಕ್ಕೆ ಆಗಮಿಸಿ ಭಾಷಣ ಮಾಡಲಿದ್ದಾರೆ.

zdsd
ಸಾಂಸ್ಕೃತಿಕ ನಗರಿಗೆ ನಾಳೆ ಮೋದಿ ಆಗಮನ

ಯಾವ ರೀತಿ ಭದ್ರತೆ:
ನರೇಂದ್ರ ಮೋದಿ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮ ನಡೆಯುವ ಸ್ಥಳವನ್ನು ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮವಾಗಿ ಇಡೀ ಮೈದಾನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಇದಲ್ಲದೇ 7 ಮಂದಿ‌ ಎಸ್​ಪಿ ದರ್ಜೆ ಅಧಿಕಾರಿಗಳು, 22 ಮಂದಿ ಎಸಿಪಿ ಅಧಿಕಾರಿಗಳು, 50ಕ್ಕೂ ಹೆಚ್ಚು ಇನ್ಸ್​ಪೆಕ್ಟರ್​ಗಳು ಸೇರಿ 1500 ಪೋಲಿಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜತೆಗೆ ಮೋದಿ ಆಗಮನದ ಹಿನ್ನಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 7 ಗಂಟೆಯವರೆಗೆ ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಸಾಂಸ್ಕೃತಿಕ ನಗರಿಗೆ ನಾಳೆ ಮೋದಿ ಆಗಮನ

ಮೋದಿ ರ್ಯಾಲಿಗೆ ಅನುಮತಿ ನೀಡಬಾರದು-ದೂರು ದಾಖಲು :

ರಾಜ್ಯದಲ್ಲಿ ಮೊದಲ ಹಂತದ ಹದಿನಾಲ್ಕು ಕ್ಷೇತ್ರಗಳಿಗೆ ಇದೇ ತಿಂಗಳ 18 ರಂದು ಚುನಾವಣೆ ನಡೆಯಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ರಾಜ್ಯದ ಚಿಕ್ಕೋಡಿಯಲ್ಲಿ ನಡೆಯಲಿದೆ. ಮತದಾನದ ದಿನ ಮೋದಿ ಅವರ ಭಾಷಣಕ್ಕೆ ಅನುವು ಮಾಡಿಕೊಟ್ಟರೆ ಮತದಾರರ ಮೇಲೆ ಪ್ರಭಾವ ಬೀರುವುದರಿಂದ ರ್ಯಾಲಿಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಹೆಚ್.ಎಂ. ವೆಂಕಟೇಶ್ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಹಾಗೂ ಚಿಕ್ಕೊಡಿಯ ನೋಡಲ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.