ಮೈಸೂರು: ಕೊರೊನಾ ಸೋಂಕು ಪ್ರಕರಣಗಳ ಪರೀಕ್ಷೆಗಾಗಿ ಡಿ.ಎಫ್.ಆರ್.ಎಲ್ ಪ್ರಯೋಗಾಲಯವು ಕೆ.ಆರ್.ಆಸ್ಪತ್ರೆಯ ವೈರಾಲಜಿ ವಿಭಾಗಕ್ಕೆ ಮೊಬೈಲ್ ಪರಕ್ ಯೂನಿಟ್ ಅನ್ನು ಕೊಡುಗೆಯಾಗಿ ನೀಡಿದೆ.
![MOBILE_PARAK_UNIT FOR KOVID TEST](https://etvbharatimages.akamaized.net/etvbharat/prod-images/kn-mys-dfrl-mobile-parak-unit-news-7208092_12052020092437_1205f_1589255677_207.jpg)
ಏನು ಮೊಬೈಲ್ ಪರಕ್ ಯೂನಿಟ್ ?
ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್)ವು ಕೊರೊನಾ ಪ್ರಕರಣಗಳ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಯ ವೈರಾಲಜಿ ವಿಭಾಗಕ್ಕೆ ಒಂದು ನೂತನ ಮೊಬೈಲ್ ಪರಾಕ್ ಯೂನಿಟ್ ತಯಾರಿಸಿ ನೀಡಿದೆ. ಈ ಮೊಬೈಲ್ ಪರಕ್ ಯೂನಿಟ್ ಅನ್ನು ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ತಯಾರು ಮಾಡಲಾಗಿದೆ. ಈ ಮೊಬೈಲ್ ಪರಕ್ ಯೂನಿಟ್ ನಿಂದ ಪ್ರತಿದಿನ 100 ರಿಂದ 150 ಕ್ಕೂ ಹೆಚ್ಚಿನ ಕೊರೊನಾ ಸೋಂಕು ಪ್ರಕರಣಗಳ ಪರೀಕ್ಷೆ ನಡೆಸಬಹುದಾಗಿದೆ.
![MOBILE_PARAK_UNIT FOR KOVID TEST](https://etvbharatimages.akamaized.net/etvbharat/prod-images/kn-mys-dfrl-mobile-parak-unit-news-7208092_12052020092437_1205f_1589255677_109.jpg)
ಇದರಿಂದ ಹೆಚ್ಚಿನ ಸಂಖ್ಯೆಯ ಕೊರೊನಾ ಪರೀಕ್ಷೆಗಳನ್ನು ನಡೆಸಲು ಅನುಕೂಲವಾಗಲಿದ್ದು, ಡಿ.ಎಫ್.ಆರ್.ಎಲ್ ನ ನಿರ್ದೇಶಕರು ಈ ಮೊಬೈಲ್ ಪರಕ್ ಯೂನಿಟ್ ಅನ್ನು ಕೆ.ಆರ್.ಆಸ್ಪತ್ರೆಯ ವೈರಾಲಜಿ ವಿಭಾಗಕ್ಕೆ ನೀಡಿದ್ದಾರೆ. ಕೊರೊನಾ ಸೋಂಕು ಇದ್ದರೆ ಅದನ್ನು ಈ ಮೊಬೈಲ್ ಪರಕ್ ಯೂನಿಟ್ ನಿಂದ ಶೀಘ್ರವೇ ಪತ್ತೆ ಮಾಡಬಹುದಾಗಿದೆ.