ETV Bharat / state

ಅಧಿಕಾರಿಗಳು ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ: ಸಾ.ರಾ.ಮಹೇಶ್ - sara Mahesh press meet

ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನನ್ನು ಯಾರು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸಾ.ರಾ.ಮಹೇಶ್
ಸಾ.ರಾ.ಮಹೇಶ್
author img

By

Published : Sep 6, 2021, 1:41 PM IST

ಮೈಸೂರು: ಮನೀಶ್ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಅಂತವರು ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನನ್ನು ಯಾರೂ ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಮನೀಶ್ ಮೌದ್ಗಿಲ್, ಮತ್ತೊಂದು ಕಡೆ ಎಂಎಲ್​ಸಿ ಹೆಚ್. ವಿಶ್ವನಾಥ್ ಟೇಪ್ ಹಿಡಿದುಕೊಂಡು ಸರ್ವೇ ಮಾಡಲಿ. ಇವರ ಮಧ್ಯೆ ಸರ್ವೇ ಟೇಪ್ ಅನ್ನು ಮೇಲೆ ಎತ್ತಲು ರೋಹಿಣಿ ಸಿಂಧೂರಿ ಸಹಾಯ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್

ಮನೀಶ್ ಮೌದ್ಗಿಲ್​ಗೆ ಸಾ ರಾ ಮಹೇಶ್​ ಪ್ರಶ್ನೆ

ನಾನು ಗೊಮ್ಮಟೇಶ್ವರ, ಆಂಜನೇಯನ ಭಕ್ತ. ಸರ್ವೇ ಕಮಿಷನರ್ ಆದೇಶವನ್ನು ಸ್ವಾಗತ ಮಾಡುತ್ತೇನೆ. ಈಗಾಗಲೇ ಸರ್ವೇ ಆಗಿರುವ ಜಾಗವನ್ನು ಭೂ ಮಾಪನ ಇಲಾಖೆಯ ಆಯುಕ್ತ ಮನೀಶ್ ಮೌದ್ಗಿಲ್ ಮತ್ತೆ ಸರ್ವೇಗೆ ಆದೇಶ ಮಾಡಿರುವುದು ಸರಿಯಲ್ಲ. ಶಿಷ್ಯೆ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ 8 ವರ್ಷದಿಂದ ಎಷ್ಟು ಗೋಮಾಳಗಳನ್ನು, ಸರ್ಕಾರಿ ಜಾಗಗಳನ್ನು ಒತ್ತುವರಿ ಸರ್ವೇ ಮಾಡಿದ್ದೀರಿ ಎಂದು ಮನೀಶ್ ಮೌದ್ಗಿಲ್ ಅವರಿಗೆ ಸಾ.ರಾ.ಮಹೇಶ್ ಪ್ರಶ್ನೆ ಮಾಡಿದರು.

ಸಿಂಧೂರಿ ಕುಟುಂಬದ ಆಸ್ತಿ ಘೋಷಣೆ ಮಾಡಿದ್ದಾರಾ?

ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದ, ತಂದೆ-ತಾಯಿಯ ಆಸ್ತಿ ಎಷ್ಟಿದೆ ಎಂಬುದನ್ನು ಘೋಷಣೆ ಮಾಡಿದ್ದಾರಾ?, 8 ವರ್ಷದಲ್ಲಿ ನೀವು ಎಷ್ಟು ಆಸ್ತಿಯನ್ನು ಹೊರ ರಾಜ್ಯದಲ್ಲಿ ಮಾಡಿದ್ದೀರಿ ಎಂಬುದನ್ನು ಬಹಿರಂಗ ಪಡಿಸಿ ಎಂದು ಸವಾಲು ಹಾಕಿದ ಶಾಸಕ, ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ. ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕಿಕ್ ಬ್ಯಾಗ್ ಪಡೆದಿಲ್ಲ.‌ ನನ್ನ ವಿರುದ್ಧ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.

ಆಯುಕ್ತರ ಆದೇಶ ಸರಿಯಲ್ಲ; ಮಹೇಶ್​

ಸರ್ವೇ ಆಯುಕ್ತರು ನಮ್ಮ ಕಲ್ಯಾಣ ಮಂಟಪ ಹಾಗೂ ಇತರ ಸ್ಥಳಗಳನ್ನು ಸರ್ವೇ ಮಾಡಲು ಆದೇಶ ನೀಡಿರುವುದು ಸರಿಯಲ್ಲ. ಅದು ಇವರ ವ್ಯಾಪ್ತಿಗೆ ಬರುವುದಿಲ್ಲ ಎಂದ ಸಾರಾ ಮಹೇಶ್, ಐಎಎಸ್‌, ಐಪಿಎಸ್ ಅಧಿಕಾರಿಗಳಿಗೆ ದೊಡ್ಡ ಬಂಗಲೆ ಏಕೆ?, ಅವರಿಗೆ ಎಲ್​ಐಜಿ ಮನೆಗಳನ್ನು ನೀಡಿದರೆ ಸಾಕು. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುತ್ತೇನೆ ಎಂದು ಇದೇ ವೇಳೆ ಸಾ ರಾ ಮಹೇಶ್​​ ಸ್ಪಷ್ಟಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.