ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಅವರನ್ನು ಅಮಾನತು ಮಾಡುವ ಆಗ್ರಹ ನನ್ನದಾಗಿತ್ತು. ಸರ್ಕಾರ ಕೇವಲ ವರ್ಗಾವಣೆ ಮಾತ್ರ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
ಇಂತಹ ಅಧಿಕಾರಿ ಮೈಸೂರಿಗೆ ಬೇಡ ಅಂತಾ ಆರಂಭದಲ್ಲೇ ಹೇಳಿದ್ದೆ. ಆಗ ಸಚಿವರು, ಸಂಸದ ಹಾಗೂ ಶಾಸಕರು ಅವರ ಪರ ನಿಂತಿದ್ದರು. ಜಿಲ್ಲಾಡಳಿತಕ್ಕೆ ಅವರಿಂದ ಕೆಟ್ಟ ಹೆಸರು ಬರುತ್ತಿದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಂಡರು ಎಂದರು.
ಪಾರಂಪರಿಕ ಕಟ್ಟಡ ವ್ಯಾಪ್ತಿಯಲ್ಲಿ ಈಜುಕೊಳ, ಕಟ್ಟಡ ನವೀಕರಣ, ಮುಡಾದಿಂದ ವಕೀಲರೊಬ್ಬರಿಗೆ ನೀಡಿರುವ ದೊಡ್ಡ ಮೊತ್ತವನ್ನು ರೋಹಿಣಿ ಸಿಂಧೂರಿ ಅವರಿಂದಲೇ ಭರಿಸಬೇಕು. ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುವುದಾಗಿ ಸಾ. ರಾ. ಮಹೇಶ್ ಹೇಳಿದ್ರು.