ETV Bharat / state

ತಾಕತ್ತಿದ್ದರೆ ಪ್ರತಾಪ್ ಸಿಂಹ ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆಲ್ಲಲಿ: ಶಾಸಕ ನಾಗೇಂದ್ರ ಸವಾಲು

author img

By

Published : Jan 30, 2022, 1:28 PM IST

25 ವರ್ಷದಿಂದ ನಾನು ನಿರಂತರವಾಗಿ ಜನರ ಜತೆ ಇದ್ದೇನೆ. ನಾನು ನಿಮ್ಮ ರೀತಿ ಎಲ್ಲಿಂದಲೋ ಬಂದು ರಾಜಕಾರಣ ಮಾಡ್ತಿಲ್ಲ. ನಿಮ್ಮೂರಿನ ಒಂದು ತಾಲೂಕು ಪಂಚಾಯತ್​, ಜಿಲ್ಲಾ ಪಂಚಾತ್​ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಪ್ರತಾಪ್ ಸಿಂಹ ಅವರಿಗೆ ಶಾಸಕ ನಾಗೇಂದ್ರ ಸವಾಲು ಹಾಕಿದರು.

ನಜರ್​ಬಾದ್​ನಲ್ಲಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ

ಮೈಸೂರು: ಸಂಸದ ಪ್ರತಾಪ್​ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ನಡುವಿನ ಜಟಾಪಟಿ ಮತ್ತಷ್ಟು ತಾರಕಕ್ಕೇರಿದ್ದು, ತಾಕತ್ತಿದ್ದರೆ ಪ್ರತಾಪ್ ಸಿಂಹ ಪಂಚಾಯತ್​ ಚುನಾವಣೆಯಲ್ಲಿ ನಿಂತು ಗೆಲ್ಲಲಿ ಎಂದು ಶಾಸಕ ನಾಗೇಂದ್ರ ಸವಾಲು ಹಾಕಿದರು.

ನಜರ್​ಬಾದ್​ನಲ್ಲಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ ಅವರು, ನಮ್ಮೂರಲ್ಲಿ ನಾನು ರಾಜಕಾರಣ ಮಾಡಿದ್ದೇನೆ. ಎಲ್ಲಿಂದಲೋ ಬಂದು ರಾಜಕಾರಣ ಮಾಡೋದಲ್ಲ. 25 ವರ್ಷದಿಂದ ನಾನು ನಿರಂತರವಾಗಿ ಜನರ ಜತೆ ಇದ್ದೇನೆ. ನಾನು ನಿಮ್ಮ ರೀತಿ ಎಲ್ಲಿಂದಲೋ ಬಂದು ರಾಜಕಾರಣ ಮಾಡ್ತಿಲ್ಲ. ನಿಮ್ಮೂರಿನ ಒಂದು ತಾಲೂಕು ಪಂಚಾಯತ್​, ಜಿಲ್ಲಾ ಪಂಚಾಯತ್​ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.

ನೀವು ಸಂಸದರಾಗಿ 7 ವರ್ಷ ಆಯ್ತು. ನಿಮ್ಮ ನಾಯಕತ್ವದಲ್ಲಿ ಎಷ್ಟು ತಾಲೂಕು ಪಂಚಾಯತ್​, ಜಿಲ್ಲಾ ಪಂಚಾಯತ್​ ಗೆಲ್ಲಿಸಿದ್ದೀರಿ? ಎಂದು ಪ್ರಶ್ನಿಸಿದರು. ನೀವೇ ಮುಂದೆ ನಿಂತುಕೊಂಡು 6 ಕಾರ್ಪೊರೇಟರ್​ಗಳಿಗೆ ಟಿಕೆಟ್ ಕೊಡಿಸಿದ್ರಲ್ಲ, ಎಷ್ಟು ಜನ ಗೆಲ್ಸಿದ್ರಿ ?, ಎಂಎಲ್‌ಸಿ ಚುನಾವಣೆಯಲ್ಲಿ ರಘು ಕೌಟಿಲ್ಯ ಯಾಕೆ ಸೋತರು ?, ಹಾದಿ ಬೀದಿಯಲ್ಲಿ ನಿಂತು ಮಾತನಾಡೋದು ರಾಜಕಾರಣವಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

ಪೈಪ್‌ಲೈನ್ ಮೂಲಕ ಗ್ಯಾಸ್ ಸರಬರಾಜು ಯೋಜನೆಗೆ ರಸ್ತೆ ಅಗೆಯೋದು-ಮುಚ್ಚೋದು ಆ ಕಂಪನಿಯ ಜವಾಬ್ದಾರಿ. ಆದ್ರೆ ಪ್ರತಾಪ್ ಸಿಂಹಗೆ ಯಾಕಿಷ್ಟು ಆಸಕ್ತಿ ?. ಗ್ಯಾಸ್ ಕೊಡುವ ಯೋಜನೆಗೆ ನನ್ನ ವಿರೋಧ ಇಲ್ಲ. ಆ ಕಂಪನಿ ಯಾವುದು?, ಯಾರದ್ದು? ಅಂತಾ ಕಾರ್ಪೊರೇಟರ್​ಗಳಿಗೆ ಗೊತ್ತಿಲ್ಲ ಎಂದು ಕುಟುಕಿದರು.

ಓದಿ:ಮಹಾರಾಜರ ನಂತರ ಹೆಚ್ಚಿನ ಲೀಡ್​​​ನಲ್ಲಿ ಗೆದ್ದವನು ನಾನೇ : ಪ್ರತಾಪ್ ಸಿಂಹ

ಬೆಂಗಳೂರಿನಲ್ಲಿ 75 ಲಕ್ಷ ಮನೆಗಳಿವೆ. ಒಂದೂವರೆ ಕೋಟಿ ಜನ ಇದ್ದಾರೆ. ಅಲ್ಲಿಯೇ 50 ಸಾವಿರ ಕನೆಕ್ಷನ್ ಆಗಿಲ್ಲ. ತುಮಕೂರಲ್ಲಿ ಸ್ಮಾರ್ಟ್ ಸಿಟಿ ತಂದು ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಹುಬ್ಬಳ್ಳಿ- ಧಾರವಾಡಕ್ಕೂ ಸ್ಮಾರ್ಟ್ ಸಿಟಿ ಇದೆ. ಮೈಸೂರಿಗೂ ಸ್ಮಾರ್ಟ್ ಸಿಟಿ ತಂದಿದ್ದರೆ ಇಷ್ಟು ಸಮಸ್ಯೆಯೇ ಆಗುತ್ತಿರಲಿಲ್ಲ ಎಂದು ಹೇಳಿದರು.

ಇದು ಮಹಾರಾಜರು ಕಟ್ಟಿದ ಸಿಟಿ. ಮೈಸೂರು ಮಹಾರಾಜರ ರೀತಿ ಕೆಲಸ ಮಾಡೋಕೆ ಯಾವ ರಾಜಕಾರಣಿಗೂ ಸಾಧ್ಯ ಇಲ್ಲ. ಸುಮ್ಮನೆ ಮಹಾರಾಜರಿಗೆ ಹೋಲಿಕೆ ಮಾಡಿಕೊಳ್ಳೋದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ನಮ್ಮ ಅಧಿದೇವತೆ ಚಾಮುಂಡೇಶ್ವರಿ ಮೇಲಾಣೆ, ಇದು ಪರ್ಸಂಟೇಜ್ ವಿಚಾರದ ಜಟಾಪಟಿ ಅಲ್ಲ. ರಸ್ತೆಗಳು ಹಾಳಾದ್ರೆ ಜನರಿಗೆ ನಾವು ಉತ್ತರ ಕೊಡೋದು. ಇನ್ನೇನು ಚುನಾವಣೆ ಹತ್ತಿರ‌ ಬರ್ತಿದೆ. ಈಗ ರಸ್ತೆ ಅಗೆದು ಕೂತರೆ ನಾವು ಜನರಿಗೆ ಏನ್ ಹೇಳಬೇಕು‌ ಎಂದು ಪ್ರಶ್ನಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.