ETV Bharat / state

ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ.. ನಾಡಹಬ್ಬದ ಆಚರಣೆ ಕುರಿತು ಸಚಿವರಿಂದ ಮಾಹಿತಿ - ದಸರಾ ಬಗೆಗೆ ಮಾಹಿತಿ ನೀಡಿದ ಸಚಿವ ಸೋಮಶೇಖರ್​

ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ನಡೆಯಲಿದ್ದು, ಗಜಪಯಣ, ನಾಡಹಬ್ಬಕ್ಕೆ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂಸವಾರಿ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ​ಟಿ ಸೋಮಶೇಖರ್​ ಮಾಹಿತಿ ನೀಡಿದ್ದಾರೆ.

Minister ST Somashekar
ಸಚಿವ ಸೋಮಶೇಖರ್​
author img

By

Published : Sep 8, 2021, 5:15 PM IST

Updated : Sep 8, 2021, 5:44 PM IST

ಮೈಸೂರು: ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಜರುಗಲಿದ್ದು, ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್​​.ಟಿ. ಸೋಮಶೇಖರ್​ ಮಾಹಿತಿ ನೀಡಿದರು.

ಸಹಕಾರ ಸಚಿವ ಎಸ್​ಟಿ ಸೋಮಶೇಖರ್​ ಮಾಹಿತಿ

ಇಂದು ಅರಮನೆಯಲ್ಲಿ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಿದ ಬಳಿಕ ಈ ಬಾರಿಯ ದಸರಾ ಆಚರಣೆ ಕುರಿತು ವಿವರಣೆ ನೀಡಿದರು.

ಸೆ.13 ಕ್ಕೆ ಗಜಪಯಣ:

ಈ ಬಾರಿ ನಾಡಹಬ್ಬ ದಸರಾದಲ್ಲಿ ಅಭಿಮನ್ಯು, ಅಶ್ವತ್ಥಾಮ, ವಿಕ್ರಮ, ಧನಂಜಯ, ಕಾವೇರಿ, ಚೈತ್ರಾ, ಲಕ್ಷ್ಮಿ ಹಾಗೂ ಗೋಪಾಲಸ್ವಾಮಿ ಎಂಬ 8 ಆನೆಗಳು ಭಾಗವಹಿಸಲಿವೆ. ಸೆ.13 ರಂದು 9.30 ರಿಂದ 10.20 ರ ಶುಭ ಲಗ್ನದಲ್ಲಿ ವೀರನಹೊಸಳ್ಳಿಯಿಂದ ಗಜಪಯಣಕ್ಕೆ ಚಾಲನೆ ನೀಡಲಾಗುವುದು. ಆ ನಂತರ ಸೆ. 16 ರಂದು 8.36 ರಿಂದ 9.10 ರ ಶುಭಲಗ್ನದಲ್ಲಿ ಅರಮನೆ ಮುಂಭಾಗದ ಜಯಮಾರ್ತಾಂಡ ಗೇಟ್ ಮ‌ೂಲಕ ಅಭಿಮನ್ಯು ನೇತೃತ್ವದ 8 ಆನೆಗಳನ್ನು ಅರಮನೆಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುವುದು ಎಂದರು.

ನಂತರ ಅ.15ರ ಜಂಬೂಸವಾರಿಯ ನಂತರ ಅ.17 ರಂದು 8 ಆನೆಗಳನ್ನು ಅರಮನೆಯಿಂದ ಅವುಗಳ ಶಿಬಿರಕ್ಕೆ ಬೀಳ್ಕೊಡಲಾಗುವುದು. ಈ ಬಾರಿ 8 ಆನೆಗಳು ಹಾಗೂ ಅವುಗಳ ಜೊತೆ ಬರುವ ಆನೆ ಕುಟುಂಬಗಳ ನಿರ್ವಹಣೆಗೆ ಅರಣ್ಯ ಇಲಾಖೆ 50 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜು ಪಟ್ಟಿ ನೀಡಿದೆ ಎಂದು ಸಚಿವರು ತಿಳಿಸಿದರು.

ಅ.7 ರಂದು ನಾಡಹಬ್ಬಕ್ಕೆ ಚಾಲನೆ:

ಈ ಬಾರಿ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಅ. 07 ರಂದು ಬೆಳಗ್ಗೆ 8.15ರ ಶುಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ಉದ್ಘಾಟಕರ ಆಯ್ಕೆಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದ್ದು, ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಲಿದ್ದಾರೆ ಎಂದು ವಿವರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಗಳ ವಿವರ:

9 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆಯ ಒಳಗೆ ನಡೆಯಲಿದ್ದು, ವರ್ಚ್ಯುವಲ್ ಮೂಲಕ ಕಾರ್ಯಕ್ರಮವನ್ನು ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮಗಳನ್ನು ಸ್ಥಳೀಯ ಹಾಗೂ ಕನ್ನಡಿಗರಿಗೆ ನೀಡಬೇಕೆಂದು ತೀರ್ಮಾನಿಸಲಾಗಿದೆ. ಈ ಬಾರಿ ನಂಜನಗೂಡು ದೇವಾಲಯದ ಆವರಣದಲ್ಲಿ ಸಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಅ.15ರಂದು ಜಂಬೂಸವಾರಿ:

ಈ ಬಾರಿ ನಾಡಹಬ್ಬ ದಸರಾದ ಜಂಬೂಸವಾರಿಯನ್ನು ಅ.15ರಂದು ಕಳೆದ ಬಾರಿಯಂತೆ ಅರಮನೆಯೊಳಗೆ ನಡೆಸಲು ತೀರ್ಮಾನಿಸಲಾಗಿದ್ದು, ಸಂಜೆ 4.36 ರಿಂದ 4.46 ರೊಳಗಿನ ಶುಭ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ 5 ರಿಂದ 5.30ರೊಳಗಿನ ಶುಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಇರುವ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆಯನ್ನು ಗಣ್ಯರು ನೆರವೇರಿಸಲಿದ್ದಾರೆ.

ಈ ಬಾರಿಯ ಮೆರವಣಿಗೆಯಲ್ಲಿ ಮೂರು ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದ್ದು, 75ನೇ ಸ್ವಾತಂತ್ರ್ಯ ದಿನಾಚರಣೆ, ಕೊರೊನಾ ಮಾಹಿತಿ ಬಗ್ಗೆ ಚಿತ್ರ ಹಾಗೂ ಪೊಲೀಸ್ ಬ್ಯಾಂಡ್ ವಾಹನದ ಸ್ತಬ್ಧಚಿತ್ರಗಳು ಇರಲಿವೆ. ಈ ಎಲ್ಲಾ ಕಾರ್ಯಕ್ರಮಗಳು ವರ್ಚುವಲ್ ಮೂಲಕವೇ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದರು.

100 ಕಿ.ಮೀ. ದೀಪಾಲಂಕಾರ:

ಸರಳ ಹಾಗೂ ಸಾಂಪ್ರದಾಯಿಕ ದಸರಾವಾದರೂ ಕಳೆದ ಬಾರಿ 60 ಕಿ.ಮೀ ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ಕೋವಿಡ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 150 ರಸ್ತೆಗಳು,77 ವೃತ್ತಗಳು ಒಳಗೊಂಡ 100 ಕಿ.ಮೀ ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲು ನಿರ್ಧಿರಿಸಲಾಗಿದೆ. ಸಂಜೆ 7 ಗಂಟೆಯಿಂದ 9.30 ರವರೆಗೆ ದೀಪಾಲಂಕಾರ ಇರುತ್ತದೆ. ಅ.06 ರಿಂದ ಅ. 15 ರವರೆಗೆ ದೀಪಾಲಂಕಾರ ಪ್ರತಿದಿನ ಸಂಜೆ ಇರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಮುಖ್ಯವಾಗಿ ಚಾಮುಂಡಿ ಬೆಟ್ಟದಿಂದ ಅರಮನೆಗೆ ಜಂಬೂಸವಾರಿಯಲ್ಲಿ ಆಸೀನರಾಗಲು ಬರುವ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಗುವುದು. ಮಾರ್ಗದುದ್ದಕ್ಕೂ ಅಲಂಕಾರ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಸೆ.25ರ ನಂತರ ಕೋವಿಡ್ ಕಡಿಮೆಯಾದರೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಂಬೂಸವಾರಿಗೆ ಜಾಸ್ತಿ ಜನ ಸೇರಲು ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಓದಿ: ಚಾರ್ಜ್​ಶೀಟ್​ನಲ್ಲಿರುವುದೆಲ್ಲ ಸಂಪೂರ್ಣ ಸುಳ್ಳು, ಅನುಶ್ರೀ ವಿರುದ್ಧ ಹೇಳಿಕೆ ನೀಡಿಲ್ಲ : ಡ್ಯಾನ್ಸರ್ ಕಿಶೋರ್ ಶೆಟ್ಟಿ

Last Updated : Sep 8, 2021, 5:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.