ETV Bharat / state

ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ - mysuru crime news

ಜಮೀನಿನಲ್ಲಿ ಗಾಂಜಾ ಸೊಪ್ಪು ಬೆಳೆದಿದ್ದ ಆರೋಪಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

mysuru
ಗಾಂಜಾ ಬೆಳೆದ ಆರೋಪಿಯ ಬಂಧನ
author img

By

Published : Sep 22, 2020, 4:45 PM IST

ಮೈಸೂರು: ಜಮೀನಿನಲ್ಲಿ ಗಾಂಜಾ ಸೊಪ್ಪು ಬೆಳೆದಿದ್ದ ಆರೋಪಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಅಮಾಸೆ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದವನಾಗಿದ್ದು, ತನ್ನ ಜಮೀನಿನ 1 ಗುಂಟೆಯಲ್ಲಿ ಸುಮಾರು 17.50 ಕೆ.ಜಿ ಯಷ್ಟು ಗಾಂಜಾ ಸೊಪ್ಪನ್ನು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಹುಣಸೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಅಮಾಸೆಯನ್ನು ಬಂಧಿಸಿದ್ದಾರೆ.

ಜಮೀನಿನಲ್ಲಿ ಗಾಂಜಾ ಸೊಪ್ಪು ಬೆಳೆದಿದ್ದ ಆರೋಪಿ ಅಂದರ್​

ಬಂಧಿತನಿಂದ 17.50 ಕೆಜಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ‌ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.