ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದ ಪ್ರೇಯಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರಾಘವೇಂದ್ರ ನಗರದ ನಿವಾಸಿ ರಶ್ಮಿ (26) ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ನಲ್ಲಿ ಪ್ರಿಯಕರ ಅಕ್ಷಿತ್ ಕುಮಾರ್, ಪ್ರಿಯಕರನ ತಾಯಿ ಲಕ್ಷ್ಮಿ ಹಾಗೂ ಅಕ್ಷಿತ್ ಕುಮಾರ್ನ ಹೊಸ ಗರ್ಲ್ ಫ್ರೆಂಡ್ ವರ್ಷಿಣಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ರಶ್ಮಿ ಹಾಗೂ ಅಕ್ಷಿತ್ ಕುಮಾರ್ ನಡುವೆ ಕಳೆದ ನಾಲ್ಕು ವರ್ಷಗಳಿಂದ ಪ್ರೇಮಾಂಕುರವಾಗಿತ್ತು. ರಶ್ಮಿಗೆ ಪ್ರತಿದಿನ ಸ್ಕೂಟರ್ ನಲ್ಲಿ ಡ್ರಾಪ್ ಮಾಡುತ್ತಿದ್ದ ಅಕ್ಷಯ್ ಕುಮಾರ್, ಮದುವೆ ಆಗುವುದಾಗಿ ನಂಬಿಸಿದ್ದ. ಆದರೆ, ಕಳೆದ 15 ದಿನಗಳಿಂದ ವರ್ಷಿಣಿ ಎಂಬಾಕೆಯ ಜೊತೆ ಓಡಾಡುತ್ತಿದ್ದ. ವಂಚಿಸಿದ ಅಕ್ಷಿತ್ ಕುಮಾರ್ ಗೆ ತಾಯಿ ಲಕ್ಷ್ಮಿ ಪ್ರೋತ್ಸಾಹ ನೀಡುತ್ತಿದ್ದಾಳೆ. ನನಗೆ ಅಕ್ಷಿತ್ ಕುಮಾರ್ ಮೋಸ ಮಾಡಿದ್ದಾನೆ ಎಂದು ರಶ್ಮಿ ಡೆತ್ ನೋಟ್ ಬರೆದು ಆತ್ಮಹತ್ಯೆ ಶರಣಾಗಿದ್ದಾಳೆ. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.