ಮೈಸೂರು: ಮರದ ಕೊಂಬೆಗೆ ಕಟ್ಟಿ ಹಾಕಿದ್ದ ಮೇಕೆಯ ಮೇಲೆ ಚಿರತೆಯೊಂದು ದಾಳಿ ನಡೆಸಿ, ಕೊಂದು ಹಾಕಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮನೆಯ ಹಿಂಭಾಗ ಮರದ ಕೊಂಬೆಗೆ ಕಟ್ಟಿ ಹಾಕಿದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿದ್ದು , ಮೇಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಜನರು ಬಂದಿದ್ದಾರೆ.
ಜನರ ಕೂಗಾಟದ ಶಬ್ದಕ್ಕೆ ಚಿರತೆ ಪರಾರಿಯಾಗಿದೆ. ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.