ಮೈಸೂರು : ಬೆಂಗಳೂರಿನಲ್ಲಿ ಭೂದಾಹಿಗಳ ಪರಿಣಾಮ ಕೆರೆಗಳು ನಾಪತ್ತೆಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹೆಚ್.ಡಿ ಕೋಟೆ ತಾಲೂಕಿನಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಎಲ್ಲರೂ ವಿಫಲರಾಗಿದ್ದೇವೆ. ನಮ್ಮ ಸರಕಾರದ ಖಜಾನೆ ಸದಾ ತುಂಬಿ ತುಳುಕಲು ಬೆಂಗಳೂರು ಕಾರಣ ಹೇಳಿದರು.
ಅಭಿವೃದ್ಧಿ ಹೆಸರಿನಲ್ಲಿ ಲೂಟಿ : ಒಂದೆಡೆ ಬೆಂಗಳೂರು ಅಭಿವೃಧ್ಧಿ ಹೆಸರಿನಲ್ಲಿ ಲೂಟಿ, ಇನ್ನೊಂದು ಕಡೆ ರಾಜ್ಯದ ಅಭಿವೃದ್ಧಿ ಹೆಸರಲ್ಲೂ ದೊಡ್ಡ ಲೂಟಿ ನಡೆದಿದೆ. ಇನ್ನು ಕೆಂಪೇಗೌಡರ ಹೆಸರು ಉಳಿಸಬೇಕಾದರೆ ಬೆಂಗಳೂರಿನಿಂದ ಬರುತ್ತಿರುವ ಆದಾಯವನ್ನು ಸರಿಯಾಗಿ ಬಳಕೆ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಹೆಚ್.ಡಿ ಕೋಟೆಯಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ 50 ಲಕ್ಷ ಹಣ ಘೋಷಣೆ ಮಾಡಿದರು. ನೀವು 10 ಲಕ್ಷ ಹಣ ಕೇಳಿದ್ರಿ, ಆದರೆ ಅದು ಬರಲಿಲ್ಲ. ಈಗ ನಾನು ಕೊಡ್ತೀನೋ ಬೇರೆಯವರ ಕೈಯಲ್ಲಿ ಕೊಡಿಸ್ತೀನೋ ಗೊತ್ತಿಲ್ಲ.ಒಟ್ಟು ಭವನಕ್ಕೆ50 ಲಕ್ಷ ಹಣ ಬರುತ್ತದೆ ಎಂದು ಹೇಳಿದರು.
ಎಲ್ಲರೂ ಒಗ್ಗಟ್ಟಾಗಿ, ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂದೆ ನಡೆಯಿರಿ ಎಂದು ಸಲಹೆ ನೀಡಿದರು. ನಾನು ಇಡಿಯಿಂದ ತೊಂದರೆ ಅನುಭವಿಸಿದಾಗ ಜನ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಬುದ್ಧ, ಬಸವ ಮನೆಬಿಟ್ಟ ಘಳಿಗೆಯಲ್ಲಿ ನಾನು ಮತ್ತು ಹೆಚ್ಡಿಕೆ ಬಂದಿದ್ದೇವೆ ಎಂದು ಹೇಳಿದರು.
ಹೆಚ್.ಡಿ.ಕೆ ನನ್ನ ಸಹೋದರ : ನನ್ನ ಸೋದರರಾದ ಹೆಚ್.ಡಿ.ಕುಮಾರಸ್ವಾಮಿ ಅವರೂ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನೀವೆಲ್ಲ ರಾಮನಗರದ ಜನರಿಗಿಂತಲೂ ಹೆಚ್ಚಿನ ಅಭಿಮಾನವನ್ನು ತೋರಿ ಬರಮಾಡಿಕೊಂಡಿದ್ದೀರಿ. ನನ್ನನ್ನು ಕುಮಾರಸ್ವಾಮಿ ಇಬ್ಬರನ್ನೂ ಅತ್ಯಂತ ವಿಶ್ವಾಸದಿಂದ ಬರಮಾಡಿಕೊಂಡಿದ್ದಕ್ಕೆ ಸಾಷ್ಟಾಂಗ ನಮಸ್ಕಾರ ಎಂದು ಹೇಳಿದರು.
ಒಂದೇ ವೇದಿಕೆಯಲ್ಲಿ ಡಿಕೆಶಿ - ಹೆಚ್ ಡಿಕೆ: ರಾಜಕೀಯ ರಣರಂಗದಲ್ಲಿ ಹಾವು ಮುಂಗುಸಿಯಂತೆ ಬೈದಾಡುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದರು.
ಓದಿ : ದಸರಾ ಮಹೋತ್ಸವ: ಉನ್ನತ ಮಟ್ಟದ ಸಭೆಯ ಕಾರ್ಯಸೂಚಿಯಲ್ಲಿ ದಿನಾಂಕ ದೋಷ